ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲಿನ ಆಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ.
ಸಾಣೂರುಪದವು ಗಣೇಶ್ ಎಂಬವರ ಪುತ್ರ ಕಾರ್ತಿಕ್ (16) ಸಿಡಿಲು ಬಡಿದು ಸಾವನ್ನಪ್ಪಿದ ಬಾಲಕ.

ರಾತ್ರಿ ಮನೆಯವರೆಲ್ಲರೂ ಊಟ ಮುಗಿಸಿ ಮಲಗಿದ್ದು, ಈ ವೇಳೆ ಜೋರಾಗಿ ಸಿಡಿಲು ಸಹಿತ ಮಳೆ ಬಂದಿದ್ದು, ಮಲಗಿದ್ದವರಿಗೆ ವಿದ್ಯುತ್ ಶಾಕ್ ಹೊಡೆದ ಅನುಭವವಾಗಿದೆ. ಈ ವೇಳೆ ಮನೆಮಂದಿ ಹಾಲ್ ಗೆ ಓಡಿ ಬಂದಿದ್ದಾರೆ. ಆದರೇ ಬಾಲಕ ಕಾರ್ತಿಕ್ ಏಳದೆ ಇದ್ದಾಗ, ಆತನನ್ನು ತಕ್ಷಣವೇ ಕೈಕಂಬದ ಕ್ಲಿನಿಕ್ ಗೆ ಕರೆತರಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಿದಾಗ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























