ಬಲ್ನಾಡು : ಬೆಳಿಯೂರುಕಟ್ಟೆ ಸಾಜ ಶ್ರೀದುರ್ಗಾ – ವೆಂಕಟರಮಣ ಭಜನಾ ಮಂದಿರದ ಬಳಿ ಇರುವ ಸಮುದಾಯದ ಭವನದಲ್ಲಿ ವಿದೂಷಿ ಕಾವ್ಯ ಪೆರ್ಲ ಇವರ ನೇತೃತ್ವದಲ್ಲಿ ಭರತನಾಟ್ಯ ಕಲಿಕಾ ತರಗತಿಯ ಉದ್ಘಾಟನಾ ಕಾರ್ಯಕ್ರಮ ನ.13 ರಂದು ನಡೆಯಿತು.

ಉಮೇಶ್ ನಾಯ್ಕ ಸರೋಳಿಕಾನ ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಗಳ ಮುಖಾಂತರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳ ಭರತನಾಟ್ಯ ಕಲಿಕೆ ಯಶಸ್ವಿಯಾಗಲಿ ಎಂದು ಅತಿಥಿಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಧಾಕೃಷ್ಣ ಆಳ್ವ ಸಾಜ, ಮುರಳಿಕೃಷ್ಣ ಭಟ್ ಹಸಂತ್ತಡ್ಕ, ಕುಟ್ಟಿ ನಲಿಕೆ ಕೂಟೇಲು, ಜನಾರ್ಧನ ಪೂಜಾರಿ ಕಾಡ್ಲ, ನಾರಾಯಣ ನಾಯ್ಕ ಸಾಜ, ಸುಧಾಕರ್ ನಾಯಕ್ ಹಸಂತ್ತಡ್ಕ, ಅಕ್ಷಯ್ ಶೆಟ್ಟಿ ಸಲ್ಪಾಜೆ, ರವಿ ಚಂದ್ರ ಸಾಜ ಮತ್ತಿತರರು ಉಪಸ್ಥಿತರಿದ್ದರು.

ಭರತನಾಟ್ಯ ತರಗತಿಗೆ ಸೇರಲು ಇಚ್ಚಿಸುವವರು ಸುಧಾಕರ್ ನಾಯಕ್ ಹಸಂತ್ತಡ್ಕ (9611697847) ರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























