ಬದಿಯಡ್ಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಜ್ಜನ ವ್ಯಕ್ತಿ, ಪುತ್ತೂರು ಮೂಲದ ಡಾ.ಕೃಷ್ಣ ಮೂರ್ತಿ ಯವರ ಮೃತದೇಹವು ಉಡುಪಿ ಜಿಲ್ಲೆಯ ಕುಂದಾಪುರದ ಕುತಲ್ಲೂರು ಎಂಬಲ್ಲಿ ರೈಲ್ವೆ ಹಳಿಯ ಪಕ್ಕ ಪತ್ತೆಯಾಗಿದ್ದು, ಇವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಕೊಲೆಯೇ..!?? ಅಥವಾ ಆತ್ಮಹತ್ಯೆಯೇ..!?? ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿ.ಐ.ಡಿ ಗೆ ಒಪ್ಪಿಸಬೇಕೆಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಡಾ.ಕೃಷ್ಣಮೂರ್ತಿ ಯವರ ಸಹೋದರರಾದ ಡಾ.ರಾಮಮೋಹನ್ ಹಾಗೂ ಡಾ.ಅರವಿಂದ ರವರು ಪುತ್ತೂರಿನ ವೈದ್ಯರಾಗಿದ್ದು, ಇವರಿಬ್ಬರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ತಮ್ಮ ಪ್ರಾಮಾಣಿಕ ಸೇವೆಯಿಂದ ಪುತ್ತೂರಿನಲ್ಲಿ ಜನಪ್ರಿಯ ವೈದ್ಯರಾಗಿ ಹೆಸರುವಾಸಿಯಾಗಿರುತ್ತಾರೆ.
ಇವರ ಸಹೋದರರಾಗಿರುವ ಡಾ.ಕೃಷ್ಣಮೂರ್ತಿ ಯವರು ಕೂಡ ವೈದ್ಯರಾಗಿ ಜನಪ್ರಿಯರಾಗಿದ್ದವರು., ಅವರ ಈ ದುರಂತ ಸಾವು ನಮಗೆಲ್ಲರಿಗೂ ಅಘಾತ ತಂದಿರುತ್ತದೆ. ಅವರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಹಮ್ಮದ್ ಅಲಿ ಮನವಿ ಮಾಡಿದ್ದಾರೆ.


























