ಮುಂಬೈನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಬರ್ಬರವಾಗಿ ಸಾಯಿಸಿದ ಆಫ್ತಾಬ್ ಕ್ರೂರಿಯಾಗಿದ್ದಾನೆ., ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ.

ಹಿಂದೂ ಯುವತಿಯರನ್ನು ಮೋಸ ಮಾಡಿ ಪ್ರೇಮದ ಬಲೆಗೆ ಬೀಳಿಸಿ ಮತಾಂತರಿಸುವುದು, ಅತ್ಯಾಚಾರ ಮಾಡುವುದು, ಬ್ಲ್ಯಾಕ್‌ಮೇಲ್ ಮಾಡುವುದು, ಕೊಲ್ಲುವುದು ಇತ್ಯಾದಿ ಸಾವಿರಾರು ಗಂಭೀರ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಈ ಘಟನೆಗಳು ಈಗ ನಿತ್ಯದ್ದಾಗಿ ಬಿಟ್ಟಿದೆ. ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಲು ಇವರು ನಮ್ಮ ಮನೆಗಳಿಗೆ ತಲುಪಿದ್ದಾರೆ. ಹಿಂದೂ ಪೋಷಕರು ಮತ್ತು ಹಿಂದೂ ಯುವತಿಯರು ಎಚ್ಚರಗೊಳ್ಳುವುದು ಯಾವಾಗ..!!?? ತಮ್ಮ ಒಡಹುಟ್ಟಿದವಳ ಪುನಃ 35 ತುಂಡುಗಳಾಗಲು ಬಿಡುತ್ತೀರಾ..!!?? ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ‘ಲವ್ ಜಿಹಾದ್ ವಿರೋಧಿ ಕಾಯ್ದೆ’ಯನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ತಾಬ್‌ನನ್ನು ಕೂಡಲೇ ಗಲ್ಲಿಗೇರಿಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಒತ್ತಾಯಿಸುತ್ತಿದ್ದೇವೆ ಎಂದು ‘ರಣರಾಗಿಣಿ’ಯ ಡಾ. ದೀಕ್ಷಾ ಪೆಂಡಭಾಜೆ ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆಯಾದ ‘ರಣರಾಗಿಣಿ’ಯ ವತಿಯಿಂದ ಮುಂಬಯಿನ ದಾದರ್ (ಪೂರ್ವ) ರೈಲು ನಿಲ್ದಾಣದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಡಾ.ಪೆಂಡಭಾಜೆ ಹಾಗೂ ಇತರ ಗಣ್ಯರು, ವಿವಿಧ ಹಿಂದೂ ಸಂಘಟನೆಗಳು ಭಾಗವಹಿಸಿದ್ದವು.



























