ಪುತ್ತೂರು: ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜ.7 ರಂದು ನಡೆಯಲಿರುವ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ನ.16 ರಂದು ಬಿಡುಗಡೆಗೊಳಿಸಲಾಯಿತು.
ಪ್ರಾರಂಭದಲ್ಲಿ ಸಂಕ್ರಮಣ ವಿಶೇಷ ಪೂಜೆ, ತಂಬಿಲ ನೆರವೇರಿಸಿ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಯು.ಆರ್ ಪ್ರಾಪರ್ಟಿಸ್‌ನ ಮಾಲಕ ಉಜ್ವಲ್ ಪ್ರಭು, ಪ್ರಸಾದ್ ಇಂಡಸ್ಟ್ರೀಸ್‌ನ ಮಾಲಕ ಶಿವಪ್ರಸಾದ್ ಶೆಟ್ಟಿ, ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಪೊನ್ನಪ್ಪ ಅತಿಥಿಗಳಾಗಿ ಆಗಮಿಸಿದ್ದರು.
ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ವರದರಾಜ್ ಟ್ರೇಡರ್ಸ್ ನ ಮಾಲಕ ವರದರಾಜ್, ದೈವಸ್ಥಾನದ ಮಾಜಿ ಅಧ್ಯಕ್ಷರಾದ ಮಹಾದೇವ ಶಾಸ್ತ್ರಿ ಮಣಿಲ, ವಿನಯ ಭಂಡಾರಿ, ಕೋಕೋ ಗುರು ಮಾಲಕ ಸಂತೋಷ್, ಲಕ್ಷ್ಮೀ ಮರೀಲ್, ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲಕ ಸಂತೋಷ್, ಆಕಾಶ್ ನರ್ಸರಿ ಮಾಲಕ ಆಕಾಶ್, ಅರ್ಚಕ ನಾಗೇಶ್ ಕುದ್ರೆತ್ತಾಯ, ಸ್ವಸ್ತಿಕ್ ಫ್ರೆಂಡ್ಸ್, ಓಂ ಫ್ರೆಂಡ್ಸ್ ಕಲ್ಲಿಮಾರ್ ನ ಸದಸ್ಯರು, ದೈವಸ್ಥಾನ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ತಾರಾನಾಥ ರೈ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ವಂದಿಸಿದರು.