ಮಂಗಳೂರು : ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತವಾದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹಾಗೂ ಬಂಗಾಳ ಮೂಲದ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್ನಿಂದ ಹೊರಟಿದ್ದು, ಮಂಗಳೂರು ಬಂದರಿನಿಂದ ನೂರಾರು ಕಿ.ಮೀ ದೂರದ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತವಾಗಿದೆ.
ಅಪಘಾತದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಇಂಡಿಯನ್ ಕೋಸ್ಟ್ ಗಾರ್ಡ್ನ ಮೂರು ಹಡಗು ಹಾಗೂ ಏರ್ ಕ್ರಾಫ್ಟ್ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ.
ಘಟನೆಯ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.