ಪುತ್ತೂರು: ಬೆಂಗಳೂರಿನಲ್ಲಿ ಮತದಾರ ಪಟ್ಟಿಯಿಂದ ಲಕ್ಷಾಂತರ ಮತದಾರರನ್ನು ತೆಗೆದು ಹಾಕಿದ ಹಿನ್ನೆಲೆ ಪುತ್ತೂರಿನಲ್ಲಿ ಮತದಾರರ ಬಗ್ಗೆ ಮಾಹಿತಿ ಪಡೆಯಲು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರು ಚುನಾವಣಾ ಕಛೇರಿಗೆ ಭೇಟಿ ನೀಡಿದರು.
ಈ ವೇಳೆ ಅಧಿಕಾರಿಗಳ ಜೊತೆ ಮಾಹಿತಿ ಕಲೆ ಹಾಕಿದ ಅವರು, ಈ ವರ್ಷದಲ್ಲಿ ಎಷ್ಟು ಮತದಾರರು ಸೇರ್ಪಡೆ ಮಾಡಲಾಗಿದೆ., ಮತ್ತು ಎಷ್ಟು ಮತದಾರರನ್ನು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಿದೆ ಇದರ ಬಗ್ಗೆ ಅಂಕಿ ಅಂಶಗಳನ್ನು ನೀಡಲು ಅಧಿಕಾರಿಗಳಿಗೆ ತಿಳಿಸಿದ್ದು, ಮಾಹಿತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ..

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ಮನ್ಮೋಹನ್ ರೈ, ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷರಾದ ಶರೋನ್ ಸಿಕ್ವೇರಾ, ಸೇವಾದಳದ ಬ್ಲಾಕ್ ಅಧ್ಯಕ್ಷರಾದ ವಿಶ್ವಜಿತ್ ಅಮ್ಮಂಜೆ, ಪರಿಶಿಷ್ಟ ಜಾತಿ ಘಟಕದ ಬ್ಲಾಕ್ ಅಧ್ಯಕ್ಷರಾದ ಕೇಶವ ಪಡೀಲ್ ಉಪಸ್ಥಿತರಿದ್ದರು.


























