ಬಂಟ್ವಾಳ: ತಾಲೂಕಿನ ಸರಪಾಡಿ ಹಾಗೂ ನಾವೂರ ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ನ ಮುಂಭಾಗದಲ್ಲಿ ಸರಕಾರಿ ಜಾಗ ಇದ್ದು, ಈ ಸರಕಾರಿ ಜಾಗದಲ್ಲಿ ರಾತೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಲಾಗಿದೆ. ಸರಕಾರಿ ಜಾಗದಲ್ಲಿ ಅನಧಿಕೃತ ಶಿಲುಬೆ ನಿರ್ಮಿಸಿರುವುದರ ವಿರುದ್ಧ ಶೀಘ್ರ ತನಿಖೆ ನಡೆಸಿ ಅದನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ರವರಿಗೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಸರಕಾರಿ ಜಾಗದಲ್ಲಿ ಅನಧಿಕೃತ ಶಿಲುಬೆ ನಿರ್ಮಿಸಿರುವುದು, ಕಾನೂನು ಬಾಹಿರವಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು. ಈ ಪ್ರತಿಮೆಯ ಸುತ್ತಲೂ ಅನಧಿಕೃತ ಆವರಣವನ್ನು ನಿರ್ಮಿಸಲಾಗಿದ್ದು, ಇದರಿಂದ ಈ ಪ್ರದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಈ ಹಿನ್ನೆಲೆ ಅನಧಿಕೃತ ಪ್ರತಿಮೆಯನ್ನು ತೆರವುಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕರಾದ ನರಸಿಂಹ ಶೆಟ್ಟಿ ಮಾಣಿ, ತಾಲೂಕ್ ಸಹ ಸಂಚಾಲಕ್ ಸಂತೋಷ್ ಕೊಯಿಲ, ತಾಲೂಕು ಪ್ರಮುಖರಾದ ಶರತ್ ವಗ್ಗ, ಭಾಜಪಾದ ಪ್ರಮುಖರಾದ ಪ್ರಕಾಶ್ ಬಡಗಬೆಳ್ಳೂರು, ಪ್ರಸನ್ನ ಬಡಗಬೆಳ್ಳೂರು, ವಲಯ ಪ್ರಮುಖರಾದ ರವಿ ಅಲ್ಲಿಪಾದೆ, ರವಿ ನಾವೂರ ಉಪಸ್ಥಿತರಿದ್ದರು.


























