ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನ.23 ರಂದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 97 ನೇ ಜಯಂತಿಯನ್ನು ಆಚರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಸಂಚಾಲಕರ ತಾಯಿ ಸುಮಿತ್ರಾ ಆಚಾರ್, ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್, ಮುಖ್ಯ ಅತಿಥಿಗಳಾದ ಕೋಟೆಚಾ ಹಾಲ್ ನ ಮಾಲಕರಾದ ಶಶಾಂಕ್ ಕೋಟೆಚಾ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಶಾಲಾ ಸದಸ್ಯರಾದ ಹಾಗೂ ಸಾಯಿ ಭಕ್ತರಾದ ಪ್ರಸನ್ನ ಎನ್. ಭಟ್, ಅಶೋಕ್ ಕುಮಾರ್ ಪುತ್ತಿಲ, ಮುಖ್ಯ ಗುರುಗಳಾದ ಜಯಮಾಲಾ ವಿ ಎನ್ ರವರು ಉಪಸ್ಥಿತರಿದ್ದರು.

ಶಾಲಾ ಸಂಚಾಲಕರು ಮಾತನಾಡಿ, ಬಾಬಾ ಎನ್ನುವ ಪದದಲ್ಲಿ ಅದ್ಬುತವಾದ ಶಕ್ತಿ ಇದೆ. ಶುದ್ಧ ಮನಸ್ಸಿನಿಂದ ದೇವರ ನಾಮ ಸ್ಮರಣೆ ಮಾಡಿ ತಂದೆ ತಾಯಿಗೆ ಗೌರವ ಕೊಟ್ಟು ಒಳ್ಳೆಯ ಪ್ರಜೆಯಾಗಿ ಸಮಾಜದ ಶಕ್ತಿಯಾಗಬೇಕು ಎಂದರು.

ಮುಖ್ಯ ಅತಿಥಿಗಳು ಮಾತನಾಡಿ, ಬಾಬಾರ ಜನ್ಮದಿನವಾದ ಇಂದು ಇಲ್ಲಿಗೆ ಬಂದದ್ದು ನನಗೆ ತುಂಬಾ ಸಂತೋಷ ತಂದಿದೆ ಬಾಬಾ ರವರ ಅನುಗ್ರಹ ವಿದ್ಯಾರ್ಥಿಗಳಿಗೆ ಸದಾ ಇರಲಿ ಎಂದು ಹಾರೈಸಿದರು.
ಶಾಲಾ ಕಾರ್ಯದರ್ಶಿಗಳು ಮಾತನಾಡಿ, ಸತ್ಯಸಾಯಿಯ ಅನುಯಾಯಿಯಾಗುದರಿಂದ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯ ವಿಚಾರಗಳನ್ನು ಕಲಿತು ಒಳ್ಳೆಯ ಕೆಲಸವನ್ನು ಮಾಡಲು ಪ್ರೇರಣೆ ಸಿಗುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯರಾಮ ಕೆದಿಲಾಯರವರು ಮಾತನಾಡಿ ಮನುಷ್ಯರು ಸ್ವಾರ್ಥಿಗಳಾದಾಗ ಭಗವಂತನು ಮನುಷ್ಯನಾಗಿ ಭೂಮಿಯಲ್ಲಿ ಅವತರಿಸಿ ಸ್ವಾರ್ಥಿಗಳ ಮನಸ್ಸನ್ನು ಬದಲಾಯಿಸುವ ಕೆಲಸ ಮಾಡುವರು, ಶ್ರೀ ಭಗವಾನ್ ಸತ್ಯಸಾಯಿ ಬಾಬಾ ಸಂದೇಶವನ್ನು ಓದುತ್ತಾ ಜೀವನದಲ್ಲಿ ಅಳವಡಿಸಿ, ಸಾಮರ್ಥ್ಯವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ಭವಿಷ್ಯದ ಮಕ್ಕಳಾಗಿ ಬಾಬಾ ರವರ ಅನುಗ್ರಹ ಇರಲಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಬಿಜಾಪುರದಲ್ಲಿ ನಡೆದ 3ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಪ್ರಥಮ ಸ್ಥಾನ, ಟ್ರೆಡಿಶನಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ನಮ್ಮ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ನಿಖಿಲ್.ಬಿಕೆ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳ ಸರ್ವಾಂಗೀಣ ಚಟುವಟಿಕೆಗಳಿಗೆ ಹಾಗೂ ದೀಪಾವಳಿ ಪ್ರಯುಕ್ತ ನಡೆಸಲಾದ ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ರವರು ಸ್ವಾಗತಿಸಿ, ಸುಕನ್ಯ ಧನ್ಯವಾದಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಮುರಳಿ ಕೃಷ್ಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಾಯಿ ಭಕ್ತರಾದ ಕಾಂಚನ, ಸೂರ್ಯನಾರಾಯಣ ದಾಳಿಂಬ, ಗೋಪಾಲಕೃಷ್ಣ ಕಡಂಬಳಿತಾಯ, ಸುಜಾತ ಆಚಾರ್, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



























