ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಮಂಚಿ ಕೊಳ್ನಾಡು ಗ್ರಾಮದ ‘ಅನುಗ್ರಹ’ ನಿವಾಸಿಯಾಗಿರುವ ವಿಕಾಸ್ ಪುತ್ತೂರು ರವರು, ಪ್ರಸ್ತುತ ಬಿಜೆಪಿಯ ಸಂಘಟನಾತ್ಮಕ ಜಿಲ್ಲೆ ಮಧುಗಿರಿಯ ಪ್ರಭಾರಿ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ ಹಿಂದೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾಗಿ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.


























