ವಿಟ್ಲ: ಅನುಮತಿ ರಹಿತ ಪ್ರತಿಭಟನೆ ಮತ್ತು ಮೆರವಣಿಗೆ ಮಾಡಿದ ಆರೋಪದಡಿ ಅಯ್ಯಪ್ಪ ಭಕ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣವು ಖುಲಾಸೆಗೊಂಡಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿದ್ದನ್ನು ಖಂಡಿಸಿ ವಿಟ್ಲದ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ಇಂದು ನಡೆದಿದ್ದು, ಈ ದಿನವೇ ಅಯ್ಯಪ್ಪ ಭಕ್ತರಿಗೆ ಜಯ ಸಿಕ್ಕಿರುವುದು ಬಹಳ ವಿಶೇಷವಾಗಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ, ಅರುಣ್ ಕುಮಾರ್ ಪುತ್ತಿಲ, ದಿನೇಶ್ ವಿಟ್ಲ, ಅರುಣ್ ಎಂ. ವಿಟ್ಲ, ಜಯಂತ ವಿಟ್ಲ, ಪ್ರವೀಣ್ ಮತ್ತು ಇತರರು, ರವಿಶಂಕರ್, ರವಿ ಬಿ.ಕೆ., ರಾಜು ಪೂಜಾರಿ, ಕೃಷ್ಣಪ್ಪ, ಉದಯ ಕುಮಾರ್, ಅಕ್ಷಯ್ ರಜಪೂತ್, ದಯಾನಂದ, ರಮಾನಾಥ್ ವಿಟ್ಲ, ಜಯ ಕೊಟ್ಟಾರಿ, ಯತೀಶ್, ವರುಣ್ ರೈ, ಜಗದೀಶ್ ಪೂಜಾರಿ ವಿರುದ್ಧ ದಾಖಲಾಗಿದ್ದ ಪ್ರಕರಣವು ಖುಲಾಸೆಗೊಂಡಿದೆ.
2018 ವಿಟ್ಲ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಟಿ.ಡಿ ನಾಗರಾಜ್ ರವರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಬಂಟ್ವಾಳ ನ್ಯಾಯಾಲಯವು ಪ್ರಕರಣವನ್ನು ಖುಲಾಸೆಗೊಳಿಸಿದೆ..


























