ಪುರುಷರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರೋ
ಪ್ರಕರಣಗಳನ್ನು ನಾವು ಕಂಡಿದ್ದೇವೆ. ಆದರೆ ಪಂಜಾಬ್‌ನ
ಜಲಂಧರ್‌ನಲ್ಲಿ ನಾಲ್ವರು ಯುವತಿಯರು ಓರ್ವ
ಕಾರ್ಮಿಕನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರೋ
ಆರೋಪ ಕೇಳಿ ಬಂದಿದೆ.
ಪಂಜಾಬ್‌ನ ಜಲಂಧರ್‌ನಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಯುವತಿಯರು ಸೇರಿಕೊಂಡು ಕಾರ್ಮಿಕನ ಮೇಲೆ
ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂತ್ರಸ್ತ ಕಾರ್ಮಿಕ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಬಿಳಿ ಕಾರಿನಲ್ಲಿ ನನ್ನನ್ನು ಕಿಡ್ಯಾಪ್ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಟ್ಟಿ, ನನಗೆ ಹೊಡೆದಿದ್ದಾರೆ. ಬಳಿಕ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕಾರ್ಮಿಕ ಹೇಳಿಕೆಯನ್ನು ನೀಡಿದ್ದಾನೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರನ್ನು ನೀಡಿಲ್ಲ.
ಇನ್ನು, ಪೊಲೀಸ್ ಠಾಣೆಗೆ ದೂರು ನೀಡದಂತೆ ಪತಿಗೆ, ಪತ್ನಿ
ಒತ್ತಾಯ ಮಾಡಿದ್ದಾಳೆ. ಜೀವಂತವಾಗಿ ಉಳಿದು
ಬಂದಿರುವುದೇ ಹೆಚ್ಚು ಹೀಗಾಗಿ ಪೊಲೀಸರಿಗೆ ಯಾವುದೇ
ದೂರನ್ನು ದಾಖಲಿಸುವುದು ಬೇಡ ಎಂದು ಸಂತ್ರಸ್ತ
ಕಾರ್ಮಿಕ ಪತ್ನಿ ತಿಳಿಸಿದ್ದಾರಂತೆ.
ಸ್ಥಳೀಯ ಮಾಧ್ಯಮಗಳ ವರದಿ ಬಳಿಕ ಪಂಜಾಬ್ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಈ ಘಟನೆಗೆ
ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

























