ಪುತ್ತೂರು : ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲವನದಲ್ಲಿ ನಡೆದ “ಬಾಲವನದಲ್ಲಿ ಬಾಲರು” ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಿಸ್ಮಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳು ವಿಜ್ಞಾನ , ಹಾಗೂ ಗಣಿತದ ಮಾದರಿ ಹಾಗೂ ಪ್ರಯೋಗಗಳನ್ನು ಮಾಡಿ ತೋರಿಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅನೇಕ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಈ ಎಲ್ಲಾ ಪ್ರಯೋಗಗಳನ್ನು ನೋಡಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು ಹಾಗೂ ಖುಷಿ ಪಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರು ಹಾಗೂ ಅಧ್ಯಾಪಕರು ಮಕ್ಕಳ ಈ ಪ್ರಯೋಗಗಳನ್ನು ನೋಡಿ ಶ್ಲಾಘಿಸಿದರು.


























