ಪುತ್ತೂರು: ಕುಂಬ್ರ ಜಂಕ್ಷನ್‌ನಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಹಿನ್ನೆಲೆ ತಂಗುದಾಣದ ಮೇಲ್ಬಾವಣಿಗೆ ಹಾನಿಯುಂಟಾದ ಘಟನೆ ನ.24 ರಂದು ರಾತ್ರಿ ನಡೆದಿದೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಜಂಕ್ಷನ್‌ನಲ್ಲಿರುವ ತಂಗುದಾಣಕ್ಕೆ ರಾತ್ರಿ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಂಗುದಾಣದ ಮೇಲ್ಬಾವಣಿ ಅರ್ಧ ಕುಸಿದಿದೆ.

























