ವಿಟ್ಲ: ಭಾರತೀಯ ಮಜ್ದೂರ್ ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಜೋಗಿ ವಿಟ್ಲ ರವರು ಅಸೌಖ್ಯದಿಂದಾಗಿ ಡಿ.2 ರಂದು ನಿಧನರಾದರು.

ಉಮೇಶ್ ರವರು ಸುಮಾರು ಹದಿನೈದು ವರ್ಷಗಳ ಕಾಲ ವಿಟ್ಲದಲ್ಲಿ ಭಾರತೀಯ ಮಜ್ದೂರ್ ಸಂಘ (BMS) ಘಟಕದ ಅಧ್ಯಕ್ಷರಾಗಿ ರಿಕ್ಷಾ ಚಾಲಕ ಮಾಲಕ ಸಂಘ ಹಾಗೂ ಕಾರು ಚಾಲಕ ಮಾಲಕ ಸಂಘ ಸ್ಥಾಪಿಸಿದ್ದರು.
ಉಮೇಶ್ ರವರು ಈ ಹಿಂದೆ ವಿಟ್ಲ ರಥಬೀದಿ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸವಿದ್ದರು.
ಮೃತರು ಕುಟುಂಬಸ್ಥರು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಿಟ್ಲ ತಾಲೂಕು ಬಿಎಂಎಸ್ ಘಟಕವು ಸಂತಾಪ ಸೂಚಿಸಿದೆ..


























