ಬಂಟ್ವಾಳ: ತಾಲೂಕಿನ ವಿಟ್ಲ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ಶ್ರೀ ಕ್ಷೇತ್ರ ಕಟ್ಟತಿಲ ಶ್ರೀ ಮಹಾಮ್ಮಾಯಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಅಡ್ಡವಾಗಿ ಮಸೀದಿಯ ಶಾಶ್ವತ ಅನಧಿಕೃತ ದ್ವಾರ ನಿರ್ಮಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅನಧಿಕೃತ ದ್ವಾರ ಹಾಕಿದರ ವಿರುದ್ಧ ಸ್ಥಳಿಯಾಡಳಿತ (ಸಾಲೆತ್ತೂರು ಗ್ರಾಮ ಪಂಚಾಯತ್), ಪಿಡಿಒ, ಬಂಟ್ವಾಳ ತಾಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ( ಪಿಡಬ್ಲ್ಯೂಡಿ ) ಯವರಿಗೆ ದೂರು ಸಲ್ಲಿಸಿದರೂ ಕೂಡಾ ದ್ವಾರ ತೆರವುಗೊಳಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಹಿಂದೂ ಜಾಗರಣ ವೇದಿಕೆ ವಿಭಾಗ ಪ್ರಮುಖರು, ಜಿಲ್ಲಾ ಪ್ರಮುಖರು ಹಾಗೂ ವಿಟ್ಲ ತಾಲೂಕು ಪ್ರಮುಖರು ದೇವಸ್ಥಾನದ ಆಡಳಿತ ಸಮಿತಿ ಜೊತೆಗೆ ಚರ್ಚಿಸಿ ಇದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ ಹಾಗೂ ಪಿಡಿಓ ಗೆ ಆಗ್ರಹಿಸಿದರು. ಈ ದ್ವಾರ ತೆರವು ಗೊಳಿಸದಿದ್ದರೆ ಹಿಂದೂ ಜಾಗರಣ ವೇದಿಕೆ ಇದರ ವಿರುದ್ದ ಹೋರಾಟವನ್ನು ನಡೆಸಲಿದೆ ಎಂದು ತಿಳಿಸಿದರು ಎಂದು ತಿಳಿದು ಬಂದಿದೆ..


























