Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ದ.ಕ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗದೇ ಇರುವುದು ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವೈಫಲ್ಯ..!!- ಕನ್ನಡ ಸೇನೆಯಿಂದ ಪತ್ರಿಕಾಗೋಷ್ಠಿ

December 7, 2022
in ಪುತ್ತೂರು, ಮಂಗಳೂರು, ರಾಜಕೀಯ, ಶಿಕ್ಷಣ
0
ದ.ಕ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗದೇ ಇರುವುದು ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವೈಫಲ್ಯ..!!- ಕನ್ನಡ ಸೇನೆಯಿಂದ ಪತ್ರಿಕಾಗೋಷ್ಠಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಈವರೆಗೆ ಇಡೀ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜು ಆಗದೇ ಇರುವುದು ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವೈಫಲ್ಯ ಹಾಗೂ ಇಲ್ಲಿನ ನಿಷ್ಪ್ರಯೋಜಕ ಜನಪ್ರತಿನಿಧಿಗಳಿಗೆ ಈ ಬಗ್ಗೆ ಸ್ವಲ್ಪವು ಕಾಳಜಿ ಇಲ್ಲದಿರುವುದೇ ಕಾರಣವಾಗಿದೆ ಎಂದು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ಹೇಳಿದರು.

Advertisement
Advertisement
Advertisement

ಅವರು ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

Advertisement
Advertisement

ಭಾರತ ದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ವಿದ್ಯಾಕಾಶಿ’ ಎಂದು ಎಲ್ಲರೂ ಪ್ರಶಂಸಿಸಿರಬೇಕಾದರೆ, ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದೇ ಇರುವುದು ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. ಇಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಕೂಡಾ ಈ ಬಗ್ಗೆ ಯೋಚನೆ ಮಾಡದೇ ಇರುವುದು ಸರ್ಕಾರಗಳ ವೈಫಲ್ಯವೋ ಅಥವಾ ಜನಪ್ರತಿನಿಧಿಗಳ ವೈಫಲ್ಯವೋ ಅಥವಾ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರಭಾವವೋ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡ ತೊಡಗಿದೆ.

ವಿಪರ್ಯಾಸವೆಂದರೆ, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು, ಬನ್ನೂರು ಗ್ರಾಮದ ಸರ್ವೆ ನಂಬ್ರ 84 ರಲ್ಲಿ 40 ಎಕ್ರೆ ಜಮೀನನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಶೈಕ್ಷಣಿಕ ಉದ್ದೇಶಕ್ಕೆ 2015ನೇ ಇಸವಿಯಲ್ಲಿ ಕಾದಿರಿಸಲಾಗಿದೆಯಾದರೂ ಈವರೆಗೂ ಸರ್ಕಾರಿ ವೈದ್ಯಕೀಯ ಶಿಕ್ಷಣ ಆರಂಭಿಸುವ ಯಾವುದೇ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಚುನಾವಣೆ ಹತ್ತಿರ ಬರುವಾಗ ಸಚಿವ ಮಹೋದಯರುಗಳು ಚಿಕ್ಕ ಪುಟ್ಟ ರಸ್ತೆ ಕಾಮಗಾರಿ, ಪ್ರತಿಮೆ ಅನಾವರಣ, ಸರ್ಕಲ್ ಉದ್ಘಾಟನೆ ಇಂತಹ ಕಾಯಕ್ರಮಗಳಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು, ಸಮಾಜ ಸೇವೆ ಎಂದು ಬಿಂಬಿಸುತ್ತಿದ್ದು, ಜನ ಸಾಮಾನ್ಯರಿಗೆ ಅತ್ಯವಶ್ಯಕವಾಗಿರುವ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಾದ ಮಡಿಕೇರಿ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಗೂ ಕೂಡಾ ಅನುಕೂಲವಾಗುವಂತಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅತ್ಯವಶ್ಯಕವಾಗಿರುವ ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಶಂಕು ಸ್ಥಾಪನೆ ಕಾರ್ಯ ಯಾತಕ್ಕಾಗಿ ನೆನೆಗುದಿಗೆ ಬಿದ್ದಿದೆ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದರು.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿದ್ದು, ಅದರಲ್ಲಿ ಲಕ್ಷ ಗಟ್ಟಲೆ ಹಣ ಪಡೆದುಕೊಂಡು ವೈದ್ಯಕೀಯ ಶಿಕ್ಷಣ ನೀಡುತ್ತಿರುವಾಗ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗಬೇಕಾದರೆ ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅವಶ್ಯಕತೆ ಈ ಜಿಲ್ಲೆಗೆ ಖಂಡಿತವಾಗಿಯೂ ಅತೀ ಅವಶ್ಯಕವಾಗಿದ್ದು, ಈ ಬಗ್ಗೆ ಯಾರೂ ಜನಪ್ರತಿನಿಧಿಯೂ ಕೂಡಾ ಕಾರ್ಯಪ್ರವೃತ್ತರಾಗದೆ ಮೌನ ವಹಿಸಿರುವುದು ಕಂಡರೆ ಈ ಬೆಳವಣಿಗೆಯಲ್ಲಿ ಯಾವುದೋ ಅಗೋಚರವಾದ ಷಡ್ಯಂತ್ರಗಳಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಕಾದಿರಿಸಿದ ಜಮೀನನ್ನು ಬೇರೆ ವಿಚಾರಗಳಿಗೆ ಬಳಸಿಕೊಳ್ಳುವ ವಿಚಾರ ಕೂಡಾ ಗಮನಕ್ಕೆ ಬರುತ್ತಿದ್ದು, ಡಿಸೆಂಬರ್ 30ರೊಳಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಶಂಕು ಸ್ಥಾಪನೆ ಮಾಡಬೇಕಾಗಿ ಕನ್ನಡ ಸೇನೆ ಆಗ್ರಹಿಸುತ್ತದೆ. ಇಲ್ಲವಾದಲ್ಲಿ, ಕನ್ನಡ ಸೇನೆಯ ವತಿಯಿಂದ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಕಛೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು. ಅದೇ ರೀತಿ ಸರಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಹಾಗೂ ಬೆಂಬಲಿಸುವ ಯಾವುದೇ ಸರ್ಕಾರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕನ್ನಡ ಸೇನೆಯು ಪಕ್ಷಾತೀತವಾಗಿ ಬೆಂಬಲಿಸಿ ಅತ್ಯಂತ ತ್ವರಿತ ಗತಿಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಲ್ಲಿ ಸೇನೆಯು ಸಹಕಾರವನ್ನು ನೀಡಲಿದೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆ ಪ್ರಾರಂಭ ಆಗುವವರೆಗೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ , ಜಿಲ್ಲಾ ಕಾರ್ಯಧ್ಯಕ್ಷ ಗುರುಚಂದ್ರ ಹೆಗ್ಡೆ ಉಪಸ್ಥಿತರಿದ್ದರು.

Advertisement
Previous Post

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಸೂಚನೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Next Post

ಕುಂದಾಪುರದಲ್ಲಿ ನಡೆದ ‘Best physic Body Building’ ಸ್ಪರ್ಧೆಯಲ್ಲಿ ಪುತ್ತೂರಿನ ನಿಶಾಂತ್ ಆರ್.ಎಚ್. ರವರಿಗೆ ಬೆಳ್ಳಿ ಪದಕ

OtherNews

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!
Featured

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!
ಪುತ್ತೂರು

ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

March 11, 2026
ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!
ಕ್ರೈಮ್

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!
ಕ್ರೈಮ್

ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

March 10, 2026
ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!
ಬೆಳ್ತಂಗಡಿ

ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

March 10, 2026
ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!
Featured

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
ಕಡಬ 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಕುತ್ಯಾಡಿ..!!

ಕಡಬ 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಕುತ್ಯಾಡಿ..!!

March 11, 2026
ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ : ಪತ್ನಿಯ ಸ್ಕೆಚ್..ಪ್ರಿಯಕರನಿಂದ ಕೊಲೆ: ಲವ್ವರ್ಸ್‌ ಅರೆಸ್ಟ್..!

ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ : ಪತ್ನಿಯ ಸ್ಕೆಚ್..ಪ್ರಿಯಕರನಿಂದ ಕೊಲೆ: ಲವ್ವರ್ಸ್‌ ಅರೆಸ್ಟ್..!

March 11, 2026
ಬಸ್–ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..!!

ಬಸ್–ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..!!

March 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page