‘ಕೆಜಿಎಫ್‘ ತಾತ ಎಂದೇ ಫೇಮಸ್ ಆಗಿದ್ದ ಕೃಷ್ಣ ರಾವ್ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು (ಡಿ.7) ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ ಸೀತಾಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.
ಕೃಷ್ಣ ರಾಮ್ ಅವರು ನಟ ಶಂಕರ್ ನಾಗ್ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳಲ್ಲಿ ಕೃಷ್ಣ ರಾವ್ ಅವರು ನಟಿಸಿದ್ದಾರೆ. ಈ ಚಿತ್ರಗಳಿಂದ ಅವರು ‘ಕೆಜಿಎಫ್ ತಾತ’ ಎಂದು ಖ್ಯಾತಿ ಪಡೆದುಕೊಂಡರು. ಕೆಜಿಎಫ್ 2 ಚಿತ್ರದಲ್ಲಿನ ಅವರ ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದರು.


























