ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಏ.16ರಂದು ಬಲ್ನಾಡು ಶ್ರೀ ದಂಡ ನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರಲಿರುವ ಸಂದರ್ಭ ವಾಹನ ಸಂಚಾರದಲ್ಲಿ ಬದಲಾವಣೆ ಇದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್. ಐ ರಾಮ ನಾಯ್ಕ್ ತಿಳಿಸಿದ್ದಾರೆ.
ಬಲ್ನಾಡಿನಿಂದ ಬರುವ ಕಿರುವಾಳು ಪುತ್ತೂರು ಬೈಪಾಸ್ ರಸ್ತೆ ತಲುಪಿದಾಗ ಮಾಣಿ -ಮೈಸೂರು ರಸ್ತೆಯಲ್ಲಿ ವಾಹನ ಸಂಚಾರದ ಬದಲಿ ವ್ಯವಸ್ಥೆಯಾಗಿ ನಗರಸಭೆ ಮುಖ್ಯ ರಸ್ತೆಗೆ ಸಂಪರ್ಕ ಒದಗಿಸುವುದು, ಕಿರುವಾಳು ನಗರಸಭೆ ಮುಖ್ಯ ರಸ್ತೆ ಮಹಿಳಾ ಪೊಲೀಸ್ ಠಾಣೆ ಬಳಿಗೆ ತಲುಪಿದಾಗ ವಾಹನ ಸಂಚಾರಕ್ಕೆ ಬೈಪಾಸ್ ರಸ್ತೆಯಲ್ಲಿ ಅವಕಾಶ ನೀಡಲಾಗುವುದು ಸಾರ್ವಜನಿಕರು ಗಮನಿಸಿ ಸಹಕರಿಸುವಂತೆ ಅವರು ತಿಳಿಸಿದ್ದಾರೆ.