ಪುತ್ತೂರು : ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಇದರ ಪ್ರಯುಕ್ತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ “ಭಕ್ತಿ ಸುಪ್ರಭಾತ” ಎಂಬ ಭಕ್ತಿ ಪ್ರಧಾನ ಆಲ್ಬಮ್ ಸಾಂಗ್ ಶ್ರೀ ದೇವರ ಸನ್ನಿಧಿಯಲ್ಲಿ ಏ.16 ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ಬಿಡುಗಡೆಗೊಸಿದರು. ವಿ. ಎಸ್ ಭಟ್ ಉಪಸ್ಥಿತರಿದ್ದರು.
ಸುರೇಶ್ ಮತ್ತು ಸುಶ್ಮಿತಾ ಇವರ ನಿರ್ಮಾಣದೊಂದಿಗೆ, ಪದ್ಮರಾಜ್ ಬಿ. ಸಿ ಚಾರ್ವಕ ಇವರ ಸಂಗೀತ ನಿರ್ದೇಶನ, ರಾಗ ಸಂಯೋಜನೆ, ಸಾಹಿತ್ಯ ಹಾಗೂ ಗಾಯನದೊಂದಿಗೆ, ಶ್ರೀವಿದ್ಯಾ, ಪವಿತ್ರ ವಿ. ಮಯ್ಯ, ಮಿಥುನ್ ರಾಜ್ ವಿದ್ಯಾಪುರ ಇವರ ಸುಮಧುರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಶ್ರೀ ರಾಗ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಾಗಲಿದೆ.