ಪುತ್ತೂರು: ನಗರಸಭೆ ಕಸ ಸಾಗಾಟ ವಾಹನದ ಚಾಲಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ಡಿ.9 ರಂದು ನಡೆದಿದೆ.
ಪುತ್ತೂರು ನಗರ ಸಭಾ ಕಸ ಸಾಗಾಟ ವಾಹನದ ಚಾಲಕ, ಪುತ್ತೂರು ದೇವಸ್ಥಾನದ ಹಿಂಭಾಗದ ಬಿಜೆಪಿ ಓಣಿ ನಿವಾಸಿ ಸಚಿನ್ (25) ಮೃತರು.

ಸಚಿನ್ ನಗರಸಭೆ ಕಸ ಸಾಗಾಟ ವಾಹನದ ಚಾಲಕರಾಗಿ ಕಳೆದ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ದಿನದ ಹಿಂದೆ ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಾಯಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..

























