ಮಂಗಳೂರು: ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ನಡೆಯುವ 6ನೇ ವರುಷದ “ಮಂಗಳೂರು ಕಂಬಳ”ದ ಪೂರ್ವಭಾವಿ ಸಭೆಯು ಡಿ.9 ರಂದು ಮಂಗಳೂರಿನ ಜನತಾ ಡಿಲಕ್ಸ್ ಹೋಟೆಲಿನ ಸಭಾಭವನದಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಮಾರ್ಗದರ್ಶನ ನೀಡಿದರು. ಜಿಲ್ಲಾ ಕಂಬಳ ಸಮಿತಿಯ ಪ್ರಮುಖರಾದ ಪಿ.ಆರ್.ಶೆಟ್ಟಿ, ವಿಜಯ ಕುಮಾರ್ ಕಂಗಿನಮನೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಮಂಗಳೂರು ಕಂಬಳ ಸಮಿತಿಯ ಬಾಲಣ್ಣ ಶೆಟ್ಟಿ, ಸುಜಿತ್ ಪ್ರತಾಪ್ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಕಂಬಳ ಯಶಸ್ವಿಯಾಗಿ ನಡೆಯಲು ಮಾಡಬೇಕಾದ ಕಾರ್ಯಗಳನ್ನು ವಿವರಿಸಿದರು.

ಸಮಿತಿಯ ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ಸ್ವಾಗತಿಸಿ, ಈಶ್ವರ್ ಪ್ರಸಾದ್ ಶೆಟ್ಟಿ ವಂದಿಸಿದರು. ವರುಣ್ ಶೇಣವ ಕಾರ್ಯಕ್ರಮ ನಿರ್ವಹಿಸಿದರು.
ಇತ್ತೀಚೆಗೆ ನಿಧನರಾದ ಕೇಂದ್ರ ಅಲೆಮಾರಿ ನಿಗಮದ ಸದಸ್ಯ ಭಾಸ್ಕರ್ ದಾಸ್ ಎಕ್ಕಾರ್, ಕಂಬಳ ಸಮಿತಿಯ ಸಲಹೆಗಾರ ಗಣೇಶ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೋಕೇಶ್ ಶೆಟ್ಟಿಯವರು ನುಡಿನಮನ ಸಲ್ಲಿಸಿದರು.




























