ಮಂಗಳೂರು: ವಕೀಲ ಕುಲದೀಪ್ ಶೆಟ್ಟಿ ರವರಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪುಂಜಾಲಕಟ್ಟೆ ಠಾಣೆಯಿಂದ ಎಸ್.ಪಿ. ಕಚೇರಿಗೆ ವರ್ಗಾವಣೆಗೊಂಡ ಎಸ್.ಐ. ಸುತೇಶ್ ರವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪುಂಜಾಲಕಟ್ಟೆ ಠಾಣಾ ಎಸ್.ಐ ಸುತೇಶ್ ರವರು ಜಾಗದ ವಿಚಾರದ ಪ್ರಕರಣವೊಂದರಲ್ಲಿ ವಕೀಲ ಕುಲದೀಪ್ ಶೆಟ್ಟಿ ರವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವಕೀಲ ಸಂಘ ಪ್ರತಿಭಟನೆ ನಡೆಸಿತ್ತು.
ಇತ್ತೀಚಿಗೆ ಸುತೇಶ್ ರವರನ್ನು ಪುಂಜಾಲಕಟ್ಟೆ ಠಾಣೆಯಿಂದ ಎಸ್.ಪಿ. ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶಿಸಿದೆ ಎಂದು ತಿಳಿದು ಬಂದಿದೆ..



























