ಮಂಗಳೂರು: ಸೋಮೇಶ್ವರ ದೇವಸ್ಥಾನದ ಸಮುದ್ರದ ಬಳಿ ಸಮುದ್ರಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಉಳ್ಳಾಲ ಕಾಪಿಕಾಡ್ ಬಳಿಯ ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಮೃತಪಟ್ಟವರು.

ಪ್ರಶಾಂತ್ ಪುತ್ರ ಚಿರಾಯು ಬೇಕಲ್, ಸಹೋದರ ವರದರಾಜ್ ಬೇಕಲ್ ಅವರ ಪುತ್ರ ವಂದನ್ ಬೇಕಲ್, ಸಂಕೋಳಿಗೆಯ ಸ್ನೇಹಿತ ಮಣಿ ಎಂಬವರ ಜೊತೆಗೆ ತೆರಳಿದ್ದ ಸಂದರ್ಭ ಘಟನೆ ನಡೆದಿದೆ.
ಪ್ರತಿ ಭಾನುವಾರವೂ ಮಕ್ಕಳನ್ನು ಕರೆದುಕೊಂಡು ಸಮುದ್ರ ತೀರಕ್ಕೆ ಸಹೋದರರು ತೆರಳುತ್ತಿದ್ದರು.
ಮೃತ ಪ್ರಶಾಂತ್ ಅವರ ಪುತ್ರ ಚಿರಾಯು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈಜುಪಟುವಾಗಿದ್ದಾನೆ. ಕಣ್ಣಮುಂದೆಯೇ ತಂದೆ ಸಮುದ್ರಪಾಲಾಗುವುದನ್ನು ಕಂಡು ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಿದರೂ ಪ್ರಯೋಜನಕಾರಿಯಾಗಲಿಲ್ಲ. ರಿಕ್ಷಾ ಚಾಲಕರಾಗಿದ್ದ ಪ್ರಶಾಂತ್ ಪ್ರಸ್ತುತ ಮಂಗಳೂರಿನ ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಬಸ್ಸಿನಲ್ಲಿ ಚಾಲಕರಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..


























