ಕಡಬ: ತೋಟದ ಕೆರೆಗೆ ಕಾಡುಕೋಣ ಬಿದ್ದ ಘಟನೆ ರಾಮಕುಂಜದ ಕಾರ್ಜಾಲು ಎಂಬಲ್ಲಿ ನಡೆದಿದೆ.

ರಾಮಕುಂಜದ ಕಾರ್ಜಾಲು ಎಂಬಲ್ಲಿ ಹೊನ್ನಪ್ಪ ಗೌಡ ಎಂಬವರಿಗೆ ಸೇರಿದ ತೋಟದ ಕೆರೆಗೆ ಆಹಾರ ಅರಸಿ ಬಂದಿರುವ ಕಾಡುಕೋಣ ನಿನ್ನೆ ರಾತ್ರಿ ಬಿದ್ದಿದ್ದು, ಮನೆ ಮಂದಿ ಮುಂಜಾನೆ ತೋಟಕ್ಕೆ ಬಂದ ಸಮಯದಲ್ಲಿ ಕಾಡುಕೋಣ ಕೆರೆಯಲ್ಲಿರುವುದು ಪತ್ತೆಯಾಗಿದೆ.

ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ನೇತೃತ್ವದಲ್ಲಿ ಕಾಡುಕೋಣ ರಕ್ಷಣೆ ಕಾರ್ಯಾಚರಣೆ ನಡೆದಿದೆ. ಕೆರೆಯನ್ನು ಒಂದು ಬದಿಯಿಂದ ಒಡೆದು ಕಾಡುಕೋಣ ಹೊರ ಹೋಗುವಂತೆ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ..



























