ವಿಟ್ಲ: ಖಾಸಗಿ ಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮ ಪತ್ರ ಬರೆದ ವಿಚಾರವಾಗಿ ಪ್ರಶ್ನಿಸಿದ 10 ಹಿಂದೂ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಬಗ್ಗೆ ವರದಿಯಾಗಿದೆ.
ಖಾಸಗಿ ಸಂಸ್ಥೆಯ ಪದವಿ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮಪತ್ರ ಬರೆದಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಅದೇ ಕಾಲೇಜಿನ 10 ಹಿಂದೂ ವಿದ್ಯಾರ್ಥಿಗಳು ಪ್ರಶ್ನಿಸಿದ್ದು, ಈ ವಿಚಾರವಾಗಿ ಅವರನ್ನು ಕಾಲೇಜಿನಿಂದ ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಖಂಡಿಸಿದ್ದು, ಪ್ರಾಂಶುಪಾಲರು ತಕ್ಷಣ ಅಮಾನತು ವಾಪಸು ತೆಗೆದುಕೊಳ್ಳಬೇಕು ಹಾಗೂ ಇದಕ್ಕೆ ಕಾರಣೀಕರ್ತರಾದ ಇಬ್ಬರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾಗಿ ತಿಳಿದು ಬಂದಿದೆ..
ಈ ವಿಚಾರವಾಗಿ ಈ ಹಿಂದೆಯೂ ಎರಡು ಬಾರಿ ಜಗಳವಾಗಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರವೆಂದು ಹಿಂದೂ ಸಂಘಟನೆಗಳು ಆರೋಪಿಸಿದೆ..



























