ವಿಟ್ಲ: ಖಾಸಗಿ ಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮಪತ್ರ ಬರೆದ ವಿಚಾರವಾಗಿ ಪ್ರಶ್ನಿಸಿದ 10 ಹಿಂದೂ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂಬ ವಿಚಾರ ಸರಿಯಲ್ಲ 10 ಜನರನ್ನು ಅಮಾನತು ಮಾಡಲಾಗಿಲ್ಲ ಎಂದು ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ತಿಳಿಸಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷರಾದ ಪದ್ಮನಾಭ ಕಟ್ಟೆಯವರು ಪ್ರತಿಕ್ರಿಯಿಸಿದ್ದು, ಈ ಘಟನೆಯಲ್ಲಿ ವಿದ್ಯಾರ್ಥಿನಿಯನ್ನು ಮತ್ತು ಮುಸ್ಲಿಂ ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ಹತ್ತು ಮಂದಿ ವಿದ್ಯಾರ್ಥಿಗಳು ಯಾರೂ ಅಮಾನತು ಆಗಿಲ್ಲ., ಈ ವಿಚಾರಕ್ಕೆ ಶಾಲಾಭಿವೃದ್ಧಿ ಸಮಿತಿ ಮತ್ತು ಪ್ರಾಂಶುಪಾಲರು ಪೂರಕವಾಗಿ ಸ್ಪಂದಿಸಿದ್ದು, ವಿಶ್ವ ಹಿಂದೂ ಪರಿಷದ್ ಈ ಬಗ್ಗೆ ನೇರವಾಗಿ ತೆರಳಿ ಮಾತನಾಡಿ ಘಟನೆಯನ್ನು ಸರಿದೂಗಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪ್ರಾಂಶುಪಾಲರ ಜೊತೆ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರು ಚರ್ಚಿಸಿದ್ದು, ನಡೆದ ಎಲ್ಲಾ ವಿಚಾರಗಳು ನಿಜವಾಗಿದೆ. ಆದರೇ ಈ ಬಗ್ಗೆ ಮಾತನಾಡಿ ವಿಚಾರವನ್ನು ಸರಿ ಪಡಿಸಲಾಗಿದೆ. ಹತ್ತು ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿಲ್ಲ. ವಿದ್ಯಾರ್ಥಿನಿಯ ಕುಟುಂಬಸ್ಥರ ಜೊತೆ ಮಾತನಾಡಿ ವಿಚಾರವನ್ನು ಮುಂದಿನ ದಿನಗಳಲ್ಲಿ ಪೂರ್ಣ ರೀತಿಯಲ್ಲಿ ಸರಿ ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ..




























