ಬಂಟ್ವಾಳ: ವಜ್ರಮಹೋತ್ಸವವನ್ನು ಆಚರಿಸಿರುವ ಚಂದಳಿಕೆ ಸರಕಾರಿ ಶಾಲೆಯು 61ನೇ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡಿತು.
ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಶಾಲೆಗಳಿಗೆ ದಾನ ಮಾಡಿದರೆ ಶ್ರದ್ಧಾಕೇಂದ್ರಗಳಿಗೆ ದಾನ ಮಾಡಿದ್ದಕ್ಕಿಂತ ಹೆಚ್ಚು ಪುಣ್ಯ ಲಭಿಸುತ್ತದೆ. ಶಾಲೆಯ ಮುಗ್ಧ ಮಕ್ಕಳೇ ನಮ್ಮ ದೇವರು ಎಂದರು.

ಕೃಷ್ಣಯ್ಯ ಕೆ ವಿಟ್ಲ ಅರಮನೆ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಎಲ್.ವಿ ಗ್ರೂಪ್ ಆಫ್ ಕಂಪನಿ ಮಾಲಕರಾದ ದಿವಾಕರ್ ದಾಸ್ ನೇರ್ಲಾಜೆ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುದೇಶ್ ಭಂಡಾರಿ, ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ರಕ್ಷಿತಾ ಸನತ್, ಕರ್ನಾಟಕ ರಾಜ್ಯ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಯತೀಶ್ ಪಾದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಜಪ್ಪ ಪೂಜಾರಿ ನಿಡ್ಯ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸುಮತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕçತರಾದ ದೇಜಪ್ಪ ಪೂಜಾರಿ ನಿಡ್ಯ ರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಬಿ. ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು. ರೇಷ್ಮಾ ಲೂವಿಸ್ ಧನ್ಯವಾದಗೈದರು. ಪುರಂದರ ಸಿ ಕೂಟೇಲು ವಿದ್ಯಾವರ್ಧಕ ಸಂಘದ ವರದಿ ಮಂಡಿಸಿದರು. ಪ್ರಸನ್ನ ಪಿ, ಸೌಮ್ಯಾ, ರೆನಿಟಾ ತೋರಸ್, ಪ್ರಿಯಾಂಕ, ಜಯಲಕ್ಷ್ಮಿ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಸಹಶಿಕ್ಷಕ ವೆಂಕಟೇಶ. ಪಿ ಕಾರ್ಯಕ್ರಮ ನಿರ್ವಹಿಸಿದರು.