ಪುತ್ತೂರು: ‘ಲವ್ ಜಿಹಾದ್’ಗೆ ಸಂಬಂಧಿಸಿದಂತೆ ಸಂತ ಫಿಲೋಮಿನಾ ಕಾಲೇಜಿನ ಮುಂಭಾಗದಲ್ಲಿ ಅಳವಡಿಸಿರುವ ಬ್ಯಾನರ್ ಅನ್ನು ಶೀಘ್ರ ತೆರವುಗೊಳಿಸಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಪುತ್ತೂರು ಕಾರ್ಯಕರ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಎನ್ಎಸ್‌ಯುಐ ಮುಖಂಡ ಭಾತೀಷ್ ಅಳಕೆಮಜಲು, ಅಧ್ಯಕ್ಷ ಚಿರಾಗ್ ರೈ, ಪ್ರಧಾನ ಕಾರ್ಯದರ್ಶಿ
ಎಡ್ವರ್ಡ್ ಡಿಸೋಜ, ಮುಖಂಡ ಮಹಮ್ಮದ್ ಸೈಫ್, ನಗರ
ಪ್ರಧಾನ ಕಾರ್ಯದರ್ಶಿ ಅಸ್ಟನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.