ಪುತ್ತೂರು: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರಾಗಲು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 18 ಅಭ್ಯರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಸಮಾಜ ವಿಜ್ಞಾನ ವಿಷಯದಲ್ಲಿ 9 ಹಾಗೂ ವಿಜ್ಞಾನ ವಿಷಯದಲ್ಲಿ 9 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಮುಕುಟಕ್ಕೊಂದು ಹೊಸ ಗರಿಯೊಂದು ಸೇರ್ಪಡೆಗೊಂಡತಾಗಿದೆ.

“ಸರಕಾರಿ ಶಿಕ್ಷಕರಾಗಲು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಸದ್ಯ ಖಾಸಗಿ ಶಿಕ್ಷಕರಾಗಿರುವವರೆ ನಮ್ಮಲ್ಲಿ ವಿದ್ಯಾರ್ಥಿಗಳಾಗಿ ತರಬೇತಿ ಪಡೆಯುತ್ತಾರೆ .ಎಲ್ಲಾ ಅಭ್ಯರ್ಥಿಗಳಿಗೂ ಆನ್ಲೈನ್ ಮೂಲಕ ರಾತ್ರಿ 7 ರಿಂದ 9 ರವರೆಗೆ ಪ್ರತಿನಿತ್ಯ ಒಂದೂವರೆ ತಿಂಗಳ ಸರಣಿ ತರಬೇತಿಯನ್ನು ನೀಡಲಾಗಿತ್ತು.ಕಳೆದ ವರ್ಷ ಮೂರು ಅಭ್ಯರ್ಥಿಗಳು ಅತ್ಯುತ್ತಮ ಅಂಕಗಳಿಸಿ ಉತ್ತೀರ್ಣರಾಗಿದ್ದು ಈ ವರ್ಷ ನಮ್ಮ ಎರಡನೇ ಪ್ರಯತ್ನವಾಗಿದ್ದು ಹದಿನೆಂಟು ಅಭ್ಯರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ನಮಗೆ ಅತ್ಯಂತ ಖುಷಿ ತಂದಿದೆ” ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಸಂತಸವನ್ನು ಹಂಚಿಕೊಂಡಿದ್ದಾರೆ.
ಶಿಕ್ಷಕರಾಗಿದ್ದರೂ ತರಬೇತಿಯು ಬದ್ಧತೆಯನ್ನು ಉಂಟುಮಾಡಿ ತ್ವರಿತವಾಗಿ ಮತ್ತು ಯೋಜನಾ ಬದ್ದವಾಗಿ ತಯಾರಿಯನ್ನು ನಡೆಸಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತಮ್ಮ ಉದ್ಯೋಗದ ಜೊತೆ ತರಬೇತಿಯನ್ನು ಪಡೆದುಕೊಂಡು ಯಶಸ್ಸುಗಳಿಸಿದ ಶಿಕ್ಷಕರು ಸಾಕ್ಷಿಯಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಐಎಎಸ್ ವರೆಗಿನ ಎಲ್ಲಾ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದು ಎಲ್ಲಾ ಸರಕಾರಿ ನೇಮಕಾತಿಗಳಲ್ಲೂ ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಕಳೆದ ಎರಡು ವರ್ಷಗಳಿಂದ 60 ರಷ್ಟು ಅಭ್ಯರ್ಥಿಗಳು ವಿವಿಧ ನೇಮಕಾತಿಗಳಿಗೆ ಆಯ್ಕೆಯಾಗುವಂತೆ ಆಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು
ಅಖಿಲಾ (ಪುತ್ತೂರು), ಅಕ್ಷತಾ ಎಚ್. ಎಲ್ (ಪುತ್ತೂರು),ಅರ್ಪಿತಾ ( ಬೆಳ್ತಂಗಡಿ), ಧನ್ಯಶ್ರೀ ರೈ (ಇರ್ದೆ),ಜಯಶ್ರೀ ಕೆ. ಜೆ ( ಪುತ್ತೂರು), ಜಯಶ್ರೀ. ಎಂ (ಸುಳ್ಯ),ಕೆವಿನ್ ಜೋಯೆಲ್ ಫರ್ನಾಂಡೀಸ್ (ಪುತ್ತೂರು),ನಯನ .ಕೆ ( ಮಂಗಳೂರು),ನಿಶಾ (ಶಿಶಿಲ), ಪ್ರತಿಭಾ ಎನ್. ಸಿ (ಮುರುಳ್ಯ),ರಕ್ಷಿತಾ ( ಪಣಂಬೂರು), ರಕ್ಷಿತಾ. ಬಿ (ಏನೇಕಲ್ಲು) ರಮ್ಯಶ್ರೀ ಎಂ. ಪಿ ( ಬೆಟ್ಟಂಪಾಡಿ), ಶಶಿ ಬಿ. ಜಿ ( ಕುಂಬ್ರ),ಶ್ವೇತಾ ( ಮಂಗಳೂರು) ಸೌಮ್ಯ ಎಂ. ಎಸ್ (ಧರ್ಮಸ್ಥಳ), ಸುಪ್ರಿಯಾ ಎಂ. ಎನ್ (ಮಂಡ್ಯ), ಯಶಸ್ವಿನಿ ಎಂ. ಎಸ್ ( ಪುತ್ತೂರು).
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ಸಂಪರ್ಕಿಸಿ
ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಯಂಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ.9620468869 /9148935808