ಪುತ್ತೂರು: ಮುಂದಿನ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಅಕಾಂಕ್ಷಿಯಾಗಿರುವ ದಿವ್ಯಪ್ರಭಾ ಗೌಡ ಚಿಲ್ತಡ್ಕ ರವರ ಅಳಿಯ, ಯುವ ಉದ್ಯಮಿ ನವೀನ್ ರವರ ಅಪಹರಣಕ್ಕೊಳಗಾದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಾಜಕೀಯ ಷಡ್ಯಂತ್ರವೋ, ವೈಯಕ್ತಿಕ ದ್ವೇಷವೋ..!!?? ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಏನಿದು ಘಟನೆ..!!??
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆ ಧರ್ಮಶ್ರೀ ನಿಲಯದಲ್ಲಿ ನವೀನ್ ರವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ರವರ ತಾಯಿ ಮತ್ತು ಅವರ ಅಣ್ಣನ ಮಗ, ಪತ್ನಿ ಇದ್ದ ವೇಳೆ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದ್ದು, ಅಂಬ್ಯುಲೆನ್ಸ್ ನಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶು ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿದ್ದು, ಅಂಬ್ಯುಲೆನ್ಸ್ ನಿಂದ ಇಳಿದು ಬಂದ ಅವರು ಏಕಾಏಕಿ ನವೀನ್ ರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ರವರ ತಾಯಿ ದೂರು ನೀಡಿದ್ದಾರೆ.
ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಧ್ಯಮ ಪ್ರಕಟಣೆ ಹೊರಡಿಸಿದ ನವೀನ್ ಕುಮಾರ್ ತಂಬಿನಮಕ್ಕಿ..!!!
ಸುಳ್ಯದ ಯುವ ಉದ್ಯಮಿ, ಬೆಳ್ಳಾರೆಯ ನವೀನ್ ಮಲ್ಲಾರ ಕಾಮಧೇನು ರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ತಂಬಿನಮಕ್ಕಿಯ ನವೀನ್ ಕುಮಾರ್ ರೈ ತಂಬಿನಮಕ್ಕಿ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದಾರೆ.
ಅಪಹರಣ ವಿಷಯಕ್ಕೆ ಸಂಬಂಧಪಟ್ಟಂತೆ ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಾದ ವಿಷಯ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಆದರೆ ಈ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಇವರ ಯಾವುದೇ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರುವುದಿಲ್ಲ. ಆದರೂ ವಿನಾಕಾರಣ ನನ್ನ ಮೇಲೆ ದೂರು ನೀಡಿರುವ ನೀರಜಾಕ್ಷಿ ರವರು ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ ಎಂದು ನವೀನ್ ಕುಮಾರ್ ರೈ ತಂಬಿನಮಕ್ಕಿ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನಿಕ ವಲಯಗಳಲ್ಲಿ ಚರ್ಚೆ..!!
ಪುತ್ತೂರು ಕ್ಷೇತ್ರದ ಜನಸಾಮಾನ್ಯರ ನಡುವೆ ತನ್ನನ್ನು ತಾನು ಜನ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ರವರ ಜನಪ್ರಿಯತೆ ಹಾಗೂ ವರ್ಚಸ್ಸನ್ನು ಕಂಡು ಕೆಲವರು ಬೇಕು ಅಂತಲೇ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ಅಪಹರಣ ಪ್ರಕರಣದ ನಾಟಕ..!?? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ದಿವ್ಯಪ್ರಭಾ ರವರ ಇಮೇಜ್ ಡ್ಯಾಮೇಜ್ ಮಾಡುವ ಉದ್ಧೇಶದಿಂದ ಈ ರೀತಿಯ ಕಾರ್ಯ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರಕರಣದ ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ..
























