ಬಂಟ್ವಾಳ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ರಿ. ಬೆಳ್ತಂಗಡಿ ಇದರ 3ನೇ ಕಲ್ಲಡ್ಕ ಶಾಖೆಯು 9 ವರ್ಷಗಳನ್ನು ಪೂರೈಸಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಘದ ಅತ್ಯುತ್ತಮ ಬೆಳವಣಿಗೆಗೆ ಕಾರಣರಾದ ಗ್ರಾಹಕರೊಂದಿಗೆ ಮುಕ್ತವಾಗಿ ಬೆರೆಯಲು “ಗ್ರಾಹಕರೊಂದಿಗೆ ಒಂದು ದಿನ ” ಕಾರ್ಯಕ್ರಮ ಕಲ್ಲಡ್ಕ ಶಾಖಾ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಪದ್ಮನಾಭ ಮಣಿಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಹಕರೇ ಬ್ಯಾಂಕಿನ ಆಸ್ತಿಯಾಗಿದ್ದಾರೆ. ಉತ್ತಮ ರೀತಿಯ ಸೇವೆ ನೀಡುವುದರಲ್ಲಿ ಶ್ರೀ ಗುರುದೇವ ಬ್ಯಾಂಕ್ ಬದ್ಧವಾಗಿದೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವುದೇ ತಡ ಮಾಡದೆ ಕ್ಷಿಪ್ರವಾಗಿ ಸಾಲ ವಿತರಣೆ ಮಾಡಲಾಗುವುದು ಎಂದರು. ಹಾಗೂ ಸಹಕಾರಿ ಸಂಘದ ಇನ್ನಷ್ಟು ಬೆಳವಣಿಗೆಗೆ ಗ್ರಾಹಕರ ಹಾಗೂ ಸದಸ್ಯರ ಸಲಹೆಯನ್ನು ಪಡೆದುಕೊಂಡರು.

ವೇದಿಕೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಶ್ವತ್ ಕುಮಾರ್, ಬ್ಯಾಂಕಿನ ಸ್ಪೆಷಲ್ ಆಫೀಸರ್ ಮೋನಪ್ಪ ಪೂಜಾರಿ ಕಂಡೆತ್ಯಾರು, ಗ್ರಾಹಕರಾದ ನಾರಾಯಣ ಪಿ ಕೋಟ್ಯಾನ್, ಆನಂದ ಸಪಲ್ಯ ಉಪಸ್ಥಿತರಿದ್ದರು. ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಮನೋಹರ್ ಸ್ವಾಗತಿಸಿ,ಮೋನಪ್ಪ ಪೂಜಾರಿ ಪ್ರಸ್ತಾವಿಕ ಮಾತನಾಡಿದರು. ಬಬಿತಾ ವಂದಿಸಿದರು.



























