ಪುತ್ತೂರು: ಕರ್ನಾಟಕ ಒನ್ ಸೇವಾ ಕೇಂದ್ರವನ್ನು ತಾಲೂಕು ತಹಶೀಲ್ದಾರ್ ನಿಸರ್ಗ ಪ್ರೀಯ ರವರು ಕರ್ನಾಟಕ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಡಿ. 22 ರಂದು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರ ಎಲ್ಲಾ ಸರಕಾರೀ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಪಟ್ಟಣ ಪ್ರದೇಶದಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರಿಗೆ ಸೇವೆ ನೀಡಲು ಸಜ್ಜಾಗಿರುವ ನಿಶ್ಮಿತಾ ವಿ.ಕೆ ಅವರ ಸೇವಾ ಕೇಂದ್ರಕ್ಕೆ ಶುಭವಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ.ಎ ಬ್ಯಾಂಕ್ ನ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ನರಿಮೊಗರು ರವರು ಕರ್ನಾಟಕ ಒನ್ ಸೇವಾ ಕೇಂದ್ರದ ಮೂಲಕ ಜನರಿಗೆ ನಗುಮುಖದ ಹಾಗೂ ಜನಸ್ನೇಹಿ ಸೇವೆ ನೀಡಲು ಯೋಜನೆಯ ಏಜೆನ್ಸಿಗಳು ಬದ್ದರಾಗಿ ಕಾರ್ಯನಿರ್ವಹಿಸಬೇಕು ಎಂದು ಶುಭ ಹಾರೈಸಿದರು.



























