ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿಯ ವಿಟ್ಠಲ ಪ್ರೌಢಶಾಲೆಯಲ್ಲಿ ತಡೆಗೋಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ 15 ಲಕ್ಷ ರೂ. ಅನುದಾನವನ್ನು ಶಾಸಕ ಸಂಜೀವ ಮಠಂದೂರು ಒದಗಿಸಿದ್ದು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಾಗೂ ವಿಟ್ಠಲ ಎಜುಕೇಶನ್ ಸೊಸೈಟಿ ಸದಸ್ಯ ರವಿಪ್ರಕಾಶ್ ಮುಂದಾಳುತ್ವದಲ್ಲಿ ಒದಗಿದ ಈ ಅನುದಾನದ ತಡೆಗೋಡೆ ನಿರ್ಮಾಣದ ಶಂಕುಸ್ಥಾಪನೆ ನಡೆಯಿತು.

ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ಎನ್ ಕೃಷ್ಣ, ವಿಟ್ಲ ಶಕ್ತಿ ಕೇಂದ್ರದ ಅಧ್ಯಕ್ಷ ಲೋಕನಾಥ ಶೆಟ್ಟಿ ಕೊಲ್ಯ, ವಾರ್ಡ್ ಅಧ್ಯಕ್ಷ ವಿ ಪುರಂದರ, ವಿಟ್ಠಲ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ನಿತ್ಯಾನಂದ ನಾಯಕ್, ಸದಾಶಿವ ಬಿ, ರಾಮದಾಸ ಶೆಣೈ, ಶಿವರಾಮ ಭಟ್ ದೇವಸ್ಯ, ಗೋಕುಲ್ ದಾಸ್ ಶೆಣೈ, ಆಡಳಿತಾಧಿಕಾರಿ ಪ್ರಶಾಂತ ಚೊಕ್ಕಾಡಿ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ್, ಗುತ್ತಿಗೆ ದಾರರಾದ ಸುಜೀರ್ ಕುಮಾರ್ ಶೆಟ್ಟಿ ಮತ್ತು ಅನಿಲ್ ಕುಮಾರ್, ಅಧ್ಯಾಪಕರು ಮತ್ತಿರರು ಉಪಸ್ಥಿತರಿದ್ದರು.


























