ಸವಣೂರು : ಸಮಾಜ ಸೇವೆ ಹಾಗೂ ನಾಟಿ ವೈದ್ಯಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ರಂಗ ವಿಜಯಾ ಸಂಸ್ಥೆಯ ವತಿಯಿಂದ ಕೊಡಮಾಡುವ ‘ಕಾಯಕಜೀವಿ ಪುರಸ್ಕಾರ-2022’ ಪ್ರಶಸ್ತಿಗೆ ನಾಟಿ ವೈದ್ಯರಾದ ಸವಣೂರಿನ ವಾಸುದೇವ ಇಡ್ಯಾಡಿ ಆಯ್ಕೆಯಾಗಿದ್ದಾರೆ.

ವೈದ್ಯರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ಇ.ಎಸ್.ವಾಸುದೇವ ಇಡ್ಯಾಡಿ ರವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿದ್ದು, ಹಲವಾರು ಕಡೆ ಗೌರವಾರ್ಪಣೆ ಸನ್ಮಾನ ನಡೆದಿದೆ.
ಕಾಯಕಜೀವಿ ಪುರಸ್ಕಾರ-2022 ಪ್ರಶಸ್ತಿ ಪ್ರದಾನ ಸಮಾರಂಭವು ಡಿ.23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ರಂಗ ವಿಜಯಾ ಸಂಸ್ಥೆಯ ಅಧ್ಯಕ್ಷ ಮಾಲೂರು ವಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

























