ಪುತ್ತೂರು: ರಾಷ್ಟ್ರೀಯ ಯುವಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ “withiyc” ಅಭಿಯಾನಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲುಕ್ಮಾನ್ ಬಂಟ್ವಾಳ್ ರವರು ಇದು ಕಾಷ್ಟ್ರೀಯ ಯವಕಾಂಗ್ರೆಸ್ ನ ಮಹತ್ವಕಾಂಕ್ಷೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಯುವಕರಿಗೆ ಸೂಕ್ತ ಸ್ಥಾನ ಯುವಕಾಂಗ್ರೆಸ್ ನಿಂದ ನೀಡಲಾಗುವುದು ಹಾಗೂ ಚುನಾವಣಾ ಸಂದರ್ಭದಲ್ಲಿ ಯುವಕರನ್ನು ಸಜ್ಜುಗೊಳಿಸುವ ಮಹತ್ವದ ಪಾತ್ರವನ್ನು ಈ ಅಭಿಯಾನ ವಹಿಸಲಿದೆ ಎಂದರು.
ಪುರುಷರಕಟ್ಟೆ ಯುವಕಾಂಗ್ರೆಸ್ ವತಿಯಿಂದ ನಡೆಯುವ ಕ್ರಿಕೇಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಯುವಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ದಾಮೋದರ್ ಬಂಡಾರ್ಕರ್, ನಗರ ಸಭಾ ಸದಸ್ಯರಾದ ರಾಬಿನ್ ತಾವ್ರೋ, ಮೊಹಮ್ಮದ್ ರಿಯಾಝ್, ಜಿಲ್ಲಾ ಯುವಕಾಂಗ್ರೆಸ್ ಪ್ರ.ಕಾರ್ಯದರ್ಶಿ ರಂಜಿತ್ ಬಂಗೇರಾ, ಪುತ್ತೂರು ಯುವಕಾಂಗ್ರೆಸ್ ಪ್ರ.ಕಾರ್ಯದರ್ಶಿ ರವೂಫ್ ಸಾಲ್ಮರ, ಸನದ್ ಯೂಸುಫ್, ಅಭಿಷೇಕ್ ಆಚಾರ್ಯ , ರಶೀದ್ ಮುರ, ರೇಖಾ ಬಿ ಶೆಟ್ಟಿ, ಉಪಾಧ್ಯಕ್ಷರಾದ ಸುಮಿತ್ರ ಪುರುಷರಕಟ್ಟೆ , ಹಿರಿಯರಾದ ದಿನೇಶ್ ಕಾಮತ್, ಜೋನ್ ಸಿರಿಲ್ ರೋಡ್ರಿಗಸ್, ಕಲಾವಿದ ಕೃಷ್ಣಪ್ಪ, ಮಹಿಳಾ ಕಾಂಗ್ರೆಸ್ ನ ಸೀತಾ ಉದಯ್ ಶಂಕರ್, ಯುವಕಾಂಗ್ರೆಸ್ ನ ಸಲೀಂ ಪಾಪು, ರಹಿಮಾನ್ ಸಂಪ್ಯ, ಜುನೈದ್ ಸಾಲ್ಮರ, ಇಮ್ರಾನ್, ಶಿಹಾಬ್ ಪುರುಷರಕಟ್ಟೆ, ರಾಝ್ ಪಿ.ಕೆ, ಶರೀಫ್ ಬಲ್ನಾಡ್, ಸಿಯಾನ್ ದರ್ಬೆ, ಸಮದ್ ಮುಕ್ವೆ, ಇರ್ಫಾನ್ ಜಿಡೆಕಲ್ಲು, ಇಸ್ಮಾಯಿಲ್ ಎಂ.ಬಿ ಬಲ್ನಾಡ್, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಪುರುಷರಕಟ್ಟೆ, ಉನೈಸ್ ಗಡಿಯಾರ ಉಪಸ್ಥಿತರಿದ್ದರು. ಯುವಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಮಲೇಶ ಸರ್ವೆದೋಳಗುತ್ತು ಸ್ವಾಗತಿಸಿದರು..
























