ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ಚಂದಳಿಕೆ ಕುರುಂಬಳ ಭಾಗದಲ್ಲಿ ನಗರೋತ್ಥಾನದ 20 ಲಕ್ಷ ಮತ್ತು ಪಟ್ಟಣ ಪಂಚಾಯತ್ ನ 15 ನೇ ಹಣಕಾಸು ಯೋಜನೆಯ 2.25 ಲಕ್ಷದ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ ಇಂದು ನಡೆಯಿತು.

ಡೆಪ್ಪಿನಿ ರಸ್ತೆಗೆ 15 ಲಕ್ಷ, ಪರನೀರು ರಸ್ತೆಗೆ 3 ಲಕ್ಷ, ಕಲ್ಲಕಟ್ಟ ರಸ್ತೆಗೆ 2 ಲಕ್ಷ ಮತ್ತು ನಿಡ್ಯ ರಸ್ತೆಗೆ 2.25 ಲಕ್ಷದ ಕೆಲಸದ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಯಿತು.

ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ, ಕಾರ್ಯದರ್ಶಿಯಾದ ಕರುಣಾಕರ ಗೌಡ ನಾಯ್ತೋಟ್ಟು, ಶಕ್ತಿ ಕೇಂದ್ರದ ಅಧ್ಯಕ್ಷರಾದ ಲೋಕನಾಥ್ ಶೆಟ್ಟಿ ಕೊಲ್ಯ ಮತ್ತು ಪುಣಚ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ರಕ್ಷಿತಾ ಸನತ್ ಸಾಲಿಯಾನ್, ಹರೀಶ್ ಸಿ. ಎಚ್ ವಿಟ್ಲ ಮತ್ತು ಪಕ್ಷದ ಕಾರ್ಯಕರ್ತರಾದ ಮೋಹದಾಸ್ ಉಕ್ಕುಡ, ನೊಣಯ್ಯ ಪೂಜಾರಿ ಕಲ್ಲಕಟ್ಟ, ರಾಮಪ್ಪ ಭಂಡಾರಿ ನಿಡ್ಯ, ನರ್ಶಪ್ಪ ಪೂಜಾರಿ, ಸಂಜೀವ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ,ತಿರುಮಲೇಶ್ವರ ನಿಡ್ಯ, ಅರುಣ್ ಚಂದಳಿಕೆ,ಸದಾನಂದ ಗೌಡ ಡೆಪ್ಪಿನಿ,ಸುಶಾಂತ್ ಸಾಲಿಯಾನ್ ಚಂದಳಿಕೆ, ಮಂಜುನಾಥ ಕಲ್ಲಕಟ್ಟ,ವನಿತ್ ಡೆಪ್ಪಿನಿ,ಪುನೀತ್ ಕುರುoಬಳ ಮತ್ತು ಲೋಕನಾಥ್ ಜೋಗಿ ಕುರುoಬಳ ಮತ್ತು ಪಕ್ಷದ ಹಿರಿಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


























