ಬೆಳಗಾವಿ: ತಾಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಭೀಕರ ಡಬಲ್ ಮರ್ಡರ್ ನಡೆದಿದೆ.
ಬಸವರಾಜ್ ಬೆಳಗಾಂವ್ಕರ್ (22), ಗಿರೀಶ್ ನಾಗಣ್ಣ
(22) ಕೊಲೆಯಾದ ಯುವಕರು.

ಬಸವರಾಜ್ ಸೆಂಟ್ರಿಂಗ್ ಕೆಲಸ ಮಾಡ್ತಿದ್ರೆ, ಗಿರೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬರ್ಬರವಾಗಿ ಥಳಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ್ದಾನೆ ಎನ್ನಲಾಗಿರುವ ವ್ಯಕ್ತಿಯು ಕ್ರಿಕೆಟ್ ಆಡುತ್ತಿದ್ದ ಮೈದಾನಕ್ಕೆ ವಾಹನವನ್ನ ನುಗ್ಗಿಸಿದ್ದಾನೆ. ಕ್ರಿಕೆಟ್ ಆಡ್ತಿರುವ ಹಿನ್ನೆಲೆಯಲ್ಲಿ, ಯಾಕೆ ಇಲ್ಲಿಗೆ ಗಾಡಿಯನ್ನ ತಂದ್ರಿ ಎಂದು ಯುವಕರು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಚಾಲಕ, ಚಾಕುವಿನಿಂದ ಚುಚ್ಚಿ ಯುವಕರಿಬ್ಬರನ್ನ ಬರ್ಬರ ಹತ್ಯೆ ಮಾಡಿದ್ದಾನೆ.
ಮೃತ ಯುವಕರ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.























