ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮ ಕೋಡಿಂಬಾಡಿ ಅಂಚೆಯ ‘ಕೂಟೇಲು ತರವಾಡು ಮನೆ’ಯಲ್ಲಿ ಕುಟುಂಬದ ಹಾಗೂ ಗ್ರಾಮ ದೈವಗಳಿಗೆ ನೇಮ ನಡಾವಳಿ ಕಾರ್ಯಕ್ರಮ ಜ.4 ರಿಂದ 6ರ ವರೆಗೆ ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಜ.4 ಬೆಳಿಗ್ಗೆ 6 ಗಂಟೆಯಿಂದ ಕಲಶ ಶುದ್ದಿ, ಗಣಪತಿ ಹೋಮ, ನಾಗತಂಬಿಲ, ಸಬ್ಬಮ್ಮ ದೇವಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಹೊರಕಾಣಿಕೆ ಸಮರ್ಪಣೆ (ಬೊಳಂದೂರು, ಕೊರ್ತಾಜೆ ಜಂಕ್ಷನ್ ನಿಂದ)
ಸಂಜೆ 7 ಗಂಟೆಗೆ ದೇವಸ್ಯ ತರವಾಡು ಮನೆಯಿಂದ ಕೋಡಿಯಡ್ಕ ರಾಜನ್ ದೈವ ಕಲ್ಕುಡ, ಬೊಳಂದೂರು ಗ್ರಾಮ ಪಂಜುರ್ಲಿ ಹಾಗೂ ಅಂಕರಡ್ಕ ಮನೆಯಿಂದ ಕಲ್ಲುರ್ಟಿ ದೈವಗಳ ಭಂಡಾರ ಆಗಮಿಸಿ ನಂತರ ನೇಮೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಜ.5 ರಂದು ಬೆಳಿಗ್ಗೆ 8 ಗಂಟೆಗೆ ತರವಾಡು ಮನೆಯ ಕುಟುಂಬದ ಕಲ್ಲುರ್ಟಿ ಮತ್ತು ಬಲ್ನಾಡು ಕಲ್ಲುರ್ಟಿ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4 ಗಂಟೆಗೆ ಏಳ್ನಾಡು ದೈವ (ವ್ಯಾಘ್ರಚಾಮುಂಡಿ), ರುದ್ರಚಾಮುಂಡಿ, ಧರ್ಮದೈವ ವರ್ಣರ ಪಂಜುರ್ಲಿ – ಜಾವತೆ ಭಂಡಾರ ತೆಗೆಯುವುದು. ಸಂಜೆ 6 ಗಂಟೆಗೆ ಏಳ್ನಾಡು ದೈವ ನೇಮೋತ್ಸವ , ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 10 ಗಂಟೆಗೆ ಜಾವತೆ, 1 ಗಂಟೆಗೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಜ.6 ರ ಬೆಳಗ್ಗಿನ ಜಾವ ಕುಟುಂಬದ ಧರ್ಮದೈವ ರುದ್ರಚಾಮುಂಡಿ ನೇಮೋತ್ಸವ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..























