ವಿಟ್ಲ: ಆಟೋ ರಿಕ್ಷಾದಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.
ವಿಟ್ಲ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಹೆಚ್.ಇ ರವರ ಆದೇಶದ ಮೇರೆಗೆ ಸಬ್ ಇನ್ಸ್ಪೆಕ್ಟರ್ ಸಂದೀಪ್ ಶೆಟ್ಟಿ ರವರು ದಾಳಿ ನಡೆಸಿದ್ದು, ಸುಮಾರು 20 ಕೆ.ಜಿ. ಯಷ್ಟು ದನದ ಮಾಂಸ ಪತ್ತೆಯಾಗಿದೆ.

ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪರಾರಿಯಾದ ಆಟೋ ರಿಕ್ಷಾ ಚಾಲಕನನ್ನು ಸಾಲೆತ್ತೂರು ಐತ್ತಕುಮೇರು ನಿವಾಸಿ ಅಬೂಬಕ್ಕರ್ ಎಂದು ಗುರುತಿಸಲಾಗಿದೆ.
ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಶೆಟ್ಟಿ ಮತ್ತು ಸಿಬ್ಬಂದಿಗಳು ವಿಟ್ಲದ ಮೇಗಿನ ಪೇಟೆ ಕಡೆಗೆ ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಸಾಲೆತ್ತೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕ ಆಟೋ ರಿಕ್ಷಾವನ್ನು ನಿಲ್ಲಿಸಿ ರಿಕ್ಷಾದಿಂದ ಇಳಿದು ಓಡಿ ಹೋಗಿದ್ದು, ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಅದರ ಚಾಲಕನ ಸೀಟಿನ ಅಡಿ ಭಾಗದಲ್ಲಿ ನೋಡಿದಾಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ತಲಾ 1 ಕೆ.ಜಿಯ 10 ಕಟ್ಟು ಹಸಿ ಮಾಂಸ , 05 ಕೆ.ಜಿಯ 2 ಕಟ್ಟು ಹಸಿ ಮಾಂಸ ಕಂಡು ಬಂದಿರುತ್ತದೆ. ಒಟ್ಟು 20 ಕೆ.ಜಿ.ಯಷ್ಟು ದನದ ಹಸಿ ಮಾಂಸ ಕಂಡು ಬಂದಿರುತ್ತದೆ.
ಸದ್ರಿ ಮಾಂಸ ಮತ್ತು ಆಟೋ ರಿಕ್ಷಾವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಮಾಂಸದ ಅಂದಾಜು ಮೌಲ್ಯ ರೂ 2,500/- ಆಟೋ ರಿಕ್ಷಾದ ಅಂದಾಜು ಮೌಲ್ಯ 50,000/-ರೂಪಾಯಿ ಆಗಬಹುದು.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 205/2022 ಕಲಂ: ಕಲಂ:379,ಐಪಿಸಿ ಹಾಗೂ ಕಲಂ: 4,5,7 ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020
ರಂತೆ ಪ್ರಕರಣ ದಾಖಲಾಗಿದೆ.
























