ಉಡುಪಿ: ಸಾಂತಾಕ್ಲಾಸ್ ವೇಷ ಧರಿಸಿ ಕಾಂತಾರ ಸಿನೆಮಾದಲ್ಲಿನ ಪಂಜುರ್ಲಿ ದೈವವನ್ನು ಅಣಿಕಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭದ ಈ ವೀಡಿಯೋ ಮಾಡಲಾಗಿದ್ದು, ಸಾಂತಾಕ್ಲಾಸ್ ವೇಷಧಾರಿ ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ದೈವದ ಅನುಕರಣೆ ಮಾಡಿದ್ದಾನೆ . ಸದ್ಯ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದೈವವನ್ನು ಅಣುಕಿಸುವ ವೀಡಿಯೋ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹಿಸಿದ್ದಾರೆ.