ವಿಟ್ಲ: ಶ್ರೀವರ ಯುವಕ ಮಂಡಲ ರಿ. ಪೂರ್ಲಪ್ಪಾಡಿ ವತಿಯಿಂದ 60 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಡಿ.31 ರಂದು ಮಧ್ಯಾಹ್ನ 3 ಗಂಟೆಗೆ ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರ ವಠಾರದಲ್ಲಿ ನಡೆಯಲಿದೆ.
ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನವಾಗಿ 5000 ರೂ. ಮತ್ತು ಎಸ್.ವಿ.ಪಿ ಟ್ರೋಫಿ, ದ್ವಿತೀಯ ಬಹುಮಾನವಾಗಿ 3000 ರೂ. ಮತ್ತುಎಸ್.ವಿ.ಪಿ ಟ್ರೋಫಿ, ತೃತೀಯ ಬಹುಮಾನವಾಗಿ 1000 ರೂ. ಎಸ್.ವಿ.ಪಿ ಟ್ರೋಫಿ, ಹಾಗೂ ಚತುರ್ಥ ಬಹುಮಾನವಾಗಿ 1000 ರೂ. ಎಸ್.ವಿ.ಪಿ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ ಶುಲ್ಕ 500 ರೂ. ಅನ್ನು ಮುಂಚಿತವಾಗಿ ಪಾವತಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ 9353575294, 8431597017 ಅನ್ನು ಸಂಪರ್ಕಿಸ ಬಹುದಾಗಿದೆ..
