ವಿದೇಶದಿಂದ ಮಂಗಳೂರಿಗೆ ಬಂದ ವ್ಯಕ್ತಿಗೆ ಕೋವಿಡ್ ಸೋಂಕು ದೃಢವಾಗಿದೆ.
ದೇಶದಲ್ಲಿ ಕೊರೊನಾ ರೂಪಂತರಿ BF.7 ಸೋಂಕಿನ ಆತಂಕ ಹೆಚ್ಚಾಗಿರುವುದರಿಂದ ಹೈರಿಸ್ಕ್ ದೇಶಗಳಿಂದ ಬರುವಂತಹ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಬಂದು ಬಳಿಕ ಮಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ಆತನನ್ನು ಮಂಗಳೂರಿನಲ್ಲಿ ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.
ಈಗಾಗಲೇ ಕೊರೊನಾ ಎದುರಿಸಲು ಜಿಲ್ಲಾಡಳಿತ ಸಿದ್ದವಾಗಿದ್ದು, ದಕ್ಷಿಣ ಕನ್ನಡದ 8 ಕಾಲೇಜಿನಲ್ಲಿ ಕೋವಿಡ್ ವಾರ್ಡ್ ಸ್ಥಾಪನೆ, ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಬೆಡ್ ಐಸೋಲೇಷನ್ ವಾರ್ಡ್ ತಯಾರು ಮಾಡಲಾಗಿದೆ..