ದೇಶಾದ್ಯಂತ ಒಂದು ಗಂಟೆಯಿಂದ ಯುಪಿಐ ವಹಿವಾಟು ಸ್ಥಗಿತಗೊಂಡಿದೆ.
ಯುಪಿಐ ವಹಿವಾಟು ಸ್ಥಗಿತಗೊಂಡ ಹಿನ್ನೆಲೆ ಬಳಕೆದಾರರಿಗೆ ತೊಂದರೆಯಾಗಿದೆ. ಸಾವಿರಾರು ಬಳಕೆದಾರರು ತಮಗೆ ಆದ ತೊಂದರೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಯುಪಿಐ ಏಕೆ ಕೆಲಸ ಮಾಡುತ್ತಿಲ್ಲ, ಅದು ಸ್ಥಗಿತಗೊಂಡು ಒಂದು ಗಂಟೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆ.
ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ ಎಂದು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ..


























