ಸುಳ್ಯ: ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಅಜ್ಜಾವರ ಗ್ರಾಮದ ಮೇನಾಲ ನಿವಾಸಿ ಸುಧೀರ್ ರೈ ಎರಡು ದಿನಗಳ ಹಿಂದೆ ಅಜ್ಜಾವರ ಮಂಡೆಕೋಲು ತೆರಳುವ ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಎಂಬಲ್ಲಿಗೆ ತೆರಳಿ ಸೊಳ್ಳೆಗೆ ಹೊಡೆಯುವ ಕೀಟನಾಶಕ ಸೇವಿಸಿದ್ದು, ಮನೆಯ ಅಂಗಳ ತಲುಪುತ್ತಿದ್ದಂತೆ ಅವರು ವಾಂತಿ ಮಾಡಿದಾಗ ವಿಷ ಸೇವಿಸಿದ ವಿಚಾರ ಬಹಿರಂಗವಾಯಿತು.
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆತ್ಮಹತ್ಯೆಗೆ ಅರ್ಥಿಕ ಸಮಸ್ಯೆಯೆ ಕಾರಣ ಎಂದು ಹೇಳಲಾಗುತ್ತಿದೆ..

























