ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಶ್ವಾನ ದಳದ ಶ್ವಾನ ‘ಜ್ವಾಲ’ ಕಿಡ್ನಿ ವೈಫಲ್ಯದಿಂದ ಜ.3 ರಂದು ಸಾವನ್ನಪ್ಪಿದೆ.

ಡಾಬರ್ ಮ್ಯಾನ್ ಫಿಂಚರ್ ಜಾತಿಗೆ ಸೇರಿದ ಈ ಶ್ವಾನವು ಅಪರಾಧ ಪತ್ತೆದಳದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಕಳೆದ 7 ವರ್ಷಗಳಿಂದ 175ಕ್ಕೂ ಅಧಿಕ ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿತ್ತು.

ಪೊಲೀಸ್ ಅಧೀಕ್ಷಕರು,ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರು ಹಾಗೂ ಶ್ವಾನದಳದ ಅಧಿಕಾರಿ/ಸಿಬ್ಬಂದಿಗಳು ಅಂತಿಮ ವಿದಾಯ ಸಲ್ಲಿಸಿದರು..


ಕುಮಾರ ಕತ್ಲೆರಾ ಎಂಬವರು ಈ ಶ್ವಾನವನ್ನು ನೋಡಿಕೊಳ್ಳುತ್ತಿದ್ದರು..






























