ಪುತ್ತೂರು: ನರಿಮೊಗರಿನಲ್ಲಿ ಹಲವು ವರುಷಗಳಿಂದ ಕಾರ್ಯಚರಿಸುತ್ತಿರುವ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿಂದು ವಾರ್ಷಿಕೋತ್ಸವದ ಸಂಭ್ರಮ. ಕ್ರೀಡೋತ್ಸವ ವಾರ್ಷಿಕೋತ್ಸವ-2022-23 ಕಾರ್ಯಕ್ರಮವು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಮಾರಂಭ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸಿದ್ದಾರೆ.
ಮಕ್ಕಳ ಸಾಹಸಮಯ ಸಾಂಸ್ಕೃತಿಕ ಚಟುವಟಿಕೆಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದು, ಶಾಲಾ ಆವರಣವು ಜನರಿಂದ ತುಂಬಿದೆ.

ಸಾಮಾನ್ಯರಂತೆ ಕಾರ್ಯಕ್ರಮ ವೀಕ್ಷಿಸುತ್ತಿರುವ ಕೇಂದ್ರ ಸಚಿವೆ..!!
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರು ಕೂಡ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಕ್ರೀಡೋತ್ಸವ ವಾರ್ಷಿಕೋತ್ಸವವನ್ನು ವೀಕ್ಷಿಸಲು ಆಗಮಿಸಿದ್ದು, ಸಾಮಾನ್ಯರಂತೆ ಅವರು ಕೂಡ ಸಾರ್ವಜನಿಕರ ಮಧ್ಯೆ ಕೂತು ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಪುತ್ತೂರಿನವರೆ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರ ಈ ಸರಳ ವ್ಯಕ್ತಿತ್ವಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..

ಈ ವೇಳೆ ಮಾತನಾಡಿದ ಅವರು, ಈ ರೀತಿಯ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಕೊಡಬೇಕು ಎನ್ನುವ ನಿಟ್ಟಿನಲ್ಲಿ, ಸಂಸ್ಕಾರಯುತ ವಿದ್ಯೆಯನ್ನು ಮಕ್ಕಳಿಗೆ ನೀಡಬೇಕೆನ್ನುವ ಯೋಚನೆಯನ್ನು ಮಾಡಿದ ಎಲ್ಲರಿಗು ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಬಾರಿಗೆ ಕ್ರೀಡೋತ್ಸವಕ್ಕೆ ಆಗಮಿಸಿದ್ದೇನೆ. ಬಹಳ ಸಂತೋಷವಾಗಿದೆ. ವಿದ್ಯೆಯೊಂದಿಗೆ ಸಂಸ್ಕಾರ ಕಲಿಯುವುದು ಬಹಳ ಮುಖ್ಯ, ನಮ್ಮ ದೇಶದ ಆಚಾರ-ವಿಚಾರಗಳನ್ನು ಕಲಿಯುವುದು ಮುಖ್ಯ. ಮುಂದಿನ ದಿನಗಳಲ್ಲಿ ಈ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲಿದ್ದಾರೆ ಎಂದರು..



























