ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಮೊಬೈಲ್ ನಂಬರ್ ಕೇಳಿದ್ದು, ನಿರಾಕರಿಸಿದಾಗ ಮಾನಭಂಗಕ್ಕೆ ಯತ್ನಿಸಿದ್ದಾಗಿ ಆರೋಪಿಸಿ ಠಾಣೆಗೆ ದೂರು ನೀಡಿರುವ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಆರೋಪಿಯನ್ನು ಹಫೀದ್ ಎಂದು ಗುರುತಿಸಲಾಗಿದೆ.
ಅಪ್ರಾಪ್ತ ಹಿಂದೂ ಯುವತಿಯೋರ್ವಳು ಜ.5 ರಂದು ಸಂಜೆ ವೇಳೆ ಕಾಲೇಜಿನಿಂದ ಮನೆಗೆ ಹೋಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿದ್ದ ವೇಳೆ ಹಫೀದ್ ಎಂಬಾತ ಪ್ರೀತಿಸುವಂತೆ ಒತ್ತಡ ಹಾಕಿದ್ದು, ದೂರವಾಣಿ ಸಂಖ್ಯೆ ಕೇಳಿದಾಗ ನಿರಾಕರಿಸಿದ್ದಕ್ಕೆ, ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 03/2023 ಕಲಂ: 354(ಬಿ),506 ಐಪಿಸಿ, ಕಲಂ:12 ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

























