ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದ ಆರೋಪಿ ಶಂಕರ್ ಮಿಶ್ರಾನನ್ನು ಬೆಂಗಳೂರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಕುಡಿದ ಅಮಲಿನಲ್ಲಿ ನವೆಂಬರ್ 26ರಂದು 72 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಪಕ್ಕದಲ್ಲಿದ್ದ ಮಹಿಳೆಯ ಬಟ್ಟೆ, ಶೂ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಸಂಬಂಧ ಮಹಿಳೆಯೂ ಏರ್ ಇಂಡಿಯಾ ಗ್ರೂಪ್ ಚೇರ್ಮನ್ ಚಂದ್ರಶೇಖರನ್‌ಗೆ ಪತ್ರ ಬರೆದ ಬಳಿಕ ಬೆಂಗಳೂರಿನಲ್ಲಿ ಶಂಕರ್ ಮಿಶ್ರಾ ತಲೆ ಮರೆಸಿಕೊಂಡಿದ್ದ.
ಇಂದು ಬೆಂಗಳೂರಿನ ಸಂಜಯ್ ನಗರ ಗೆಸ್ಟ್ ಹೌಸ್‌ನಲ್ಲಿದ್ದ ಶಂಕರ್ ಮಿಶ್ರಾರನ್ನ ಸಿಸಿಬಿ ಹಾಗೂ ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧನಕ್ಕೂ ಮೊದಲೇ ಸಿಸಿಬಿ ಹಾಗೂ ದೆಹಲಿ ಪೊಲೀಸರು ಬೆಂಗಳೂರು ಕಮಿಷನರ್ ಸಹಾಯ ಕೇಳಿದ್ರು. ಕಮಿಷನರ್ ಸೂಚನೆ ಮೇರೆಗೆ ವೈಟ್‌ಫೀಲ್ಡ್‌ನಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೇ ಆರೋಪಿ ಶಂಕರ್ ಮಿಶ್ರಾ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ. ನಂತರ ಆರೋಪಿಯ ಮೊಬೈಲ್ ಲೋಕೇಷನ್ ಆಧರಿಸಿ ಸಂಜಯ್ ನಗರದಲ್ಲಿ ಬಂಧಿಸಿದ್ದಾರೆ..


























