ಪುತ್ತೂರು: ಕಾರೊಂದು ನಿಲ್ಲಿಸಿದ್ದ ಎರಡು ಕಾರು, ಒಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಘಟನೆ ಜ.8ರಂದು ರಾತ್ರಿ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ನಡೆದಿದೆ.

ಪಾಣಾಜೆ ಕಡೆಯಿಂದ ಬಂದ ಮಾರುತಿ ಇಗ್ನೀಸ್ ಕಾರು ರೆಂಜ ವೃತ್ತದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾ, ಆಲ್ಟೋ ಕಾರು ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದೆ.
ಘಟನೆಯಿಂದ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ವಾಹನದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ರೆಂಜದಲ್ಲಿ ಮನೆಯ ಗೃಹಪ್ರವೇಶದ ಕುಟ್ಟಿ ಪೂಜೆ ನಡೆಯುತ್ತಿದ್ದು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಲ್ಲಿಗೆ ತೆರಳಿದ್ದರು. ಅಪಘಾತ ಸಮಯದಲ್ಲಿ ಕಾರ್ಯಕ್ರಮ ನಡೆಯುವ ಮನೆಯಲ್ಲಿದ್ದು ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅಪಘಾತ ನಡೆದ ಸ್ಥಳದಲ್ಲಿಯೇ ವಿದ್ಯುತ್ ಎಚ್.ಟಿ ಲೈನ್ ವಿದ್ಯುತ್ ಕಂಬವಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.



























